24.4 C
Kadaba
Tuesday, April 1, 2025

ಹೊಸ ಸುದ್ದಿಗಳು

Heart attack: ಬಸ್ಸಿನಲ್ಲಿ ಕುಳಿತಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ರಯಾಣಿಕ: ಆಸ್ಪತ್ರೆಗೆ ದಾಖಲಿಸಿದರೂ ಬದುಕಲಿಲ್ಲ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

 

kadabatimes.in


kadabatimes.in

ಕಡಬ ಟೈಮ್:   ಸಾರಿಗೆ
ಬಸ್ಸಿನಲ್ಲಿ ಪ್ರಯಾಣಿಕರೋರ್ವರಿಗೆ ಹೃದಯಾಘಾತವಾದ ಘಟನೆ ಸೋಮವಾರ(.4) ಬೆಳಿಗ್ಗೆ ಧಾರವಾಡದಿಂದ ದಾಂಡೇಲಿ ಗೆ ಬರುತ್ತಿದ್ದ ಬಸ್ಸಿನಲ್ಲಿ  ನಡೆದಿದೆ.


ಬೆಳಗಾವಿ
ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ಕಲ್ಲೋಳಿಯವರ ಓಣಿ ನಿವಾಸಿಯಾಗಿರುವ 57 ವರ್ಷ ವಯಸ್ಸಿನ ಪುಂಡಲಿಕ್ ಚಂದರಗಿ ಎಂಬವರೇ ಹೃದಯಘಾತಕ್ಕೊಳಗಾದ ಪ್ರಯಾಣಿಕ.

kadabatimes.in

ಧಾರವಾಡದಿಂದ ಸಾರಿಗೆ ಬಸ್ಸಿನಲ್ಲಿ ದಾಂಡೇಲಿಗೆ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದೆ. ದಾಂಡೇಲಿಗೆ ಬಸ್ ಬರುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಇನ್ನಿತರ ಪ್ರಯಾಣಿಕರು ನಿರ್ವಾಹಕರಿಗೆ ಮಾಹಿತಿಯನ್ನು ನೀಡಿದ್ದಾರೆ. ಕುಳಿತಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇವರು ಏನು ಮಾಡಿದರೂ ಎಚ್ಚರಗೊಳ್ಳದಿದ್ದಾಗ ಬಸ್ಸಿನ ನಿರ್ವಾಹಕ ತಕ್ಷಣವೇ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿನೀಡಿದ್ದಾರೆ


ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಗೆ ಮಾಹಿತಿಯನ್ನು ನೀಡಿ ಆಂಬುಲೆನ್ಸ್ ತರಿಸಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆಸಾರ್ವಜನಿಕ
ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

kadabatimes.in

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.