24.4 C
Kadaba
Tuesday, April 1, 2025

ಹೊಸ ಸುದ್ದಿಗಳು

ಸವಣೂರು ಕೆನರಾ ಬ್ಯಾಂಕ್ ಶಾಖೆ ಮುಂಭಾಗ ಗ್ರಾಹಕರಿಂದ ಪ್ರತಿಭಟನೆ:ಜನರಿಗೆ ಆಗಿರುವ ಸಮಸ್ಯೆ ಏನು?

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

 

kadabatimes.in
ಬ್ಯಾಂಕ್ ಮುಂಭಾಗ ಗ್ರಾಹಕರು ಸೇರಿರುವ ದೃಶ್ಯ

kadabatimes.in

ಸವಣೂರು
:
ಸವಣೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಸೇವಾ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಬ್ಯಾಂಕ್
ಮುಂಭಾಗ  ಗ್ರಾಹಕರಿಂದ ನ.4ರಂದು ಪ್ರತಿಭಟನೆ ನಡೆದಿದೆ.


ಸವಣೂರಿನಲ್ಲಿ
ಕಾರ್ಯನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಲವು ವರ್ಷಗಳಿಂದ ಸರಿಯಾದ ಸೇವೆ ದೊರಕದೆ
ಗ್ರಾಹಕರು ಪರದಾಡುವಂತಾಗಿದೆ. ಹಲವಾರು ಬಾರಿ ಬ್ಯಾಂಕ್‌ನ ಶಾಖಾಧಿಕಾರಿಗಳು, ಉನ್ನತ ಅಧಿಕಾರಿಗಳ ಗಮನಕ್ಕೆ
ತಂದರೂ ಸೇವೆಯಲ್ಲಿ ಯಾವುದೇ ಸುಧಾರಣೆ ಆಗಿರುವುದಿಲ್ಲ.  ಹಿರಿಯ ಗ್ರಾಹಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ
ಸವಣೂರು ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ
ಗುಣಮಟ್ಟದ, ಗ್ರಾಹಕ ಸ್ನೇಹಿ ಸೇವೆಯಲ್ಲಿ ಒದಗಿಸುವಂತೆ ಆಗ್ರಹಿಸಲಾಯಿತು.

kadabatimes.in


ಸವಣೂರು
ಕೆ.ಸೀತಾರಾಮ ರೈ ,ರಾಕೇಶ್ ರೈ ಕೆಡೆಂಜಿ,ಮಹೇಶ್ ಕೆ.ಸವಣೂರು, ಗಿರಿಶಂಕರ ಸುಲಾಯ,ಎಂ.ಎ.ರಫೀಕ್ ,ಸುರೇಶ್
ರೈ ಸೂಡಿಮುಳ್ಳು ,ಅಶ್ವಿನ್ ಎಲ್ ಶೆಟ್ಟಿ  ಮಾತನಾಡಿದರು.ಸಚಿನ್
ಭಂಡಾರಿ ಮನವಿ ಪತ್ರ ವಾಚಿಸಿದರು.


ಬಳಿಕ
ಬ್ಯಾಂಕಿನ ಅಧಿಕಾರಿಗಳು ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ,ಸಮಸ್ಯೆ ಸರಿಪಡಿಸುವ ಕುರಿತು ಭರವಸೆ
ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. 15ದಿನಗಳೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ಬೃಹತ್
ಹೋರಾಟ ನಡೆಸುವುದಾಗಿ ಗ್ರಾಹಕರು  ಅಧಿಕಾರಿಗಳಿಗೆ ಸೂಚಿಸಿರುವುದಾಗಿ
ತಿಳಿದು ಬಂದಿದೆ.

kadabatimes.in


ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.