

![]() ![]() |
ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಪ್ರತಿಭಟನೆ |


ಕಡಬ ಟೈಮ್ಸ್ ,ರಾಜಕೀಯ:
ವಕ್ಫ್ ಆಸ್ತಿಯ
ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸ್ ಗಳನ್ನು ತಕ್ಷಣ ವಾಪಸ್ ಪಡೆಯಲು ಸರ್ಕಾರ
ಸೂಚನೆ ನೀಡಿದ ನಂತರವೂ ಬಿಜೆಪಿ ನಾಯಕರು ಅಲ್ಲಲ್ಲಿ ಪ್ರತಿಭಟನೆಗೆ
ಮುಂದಾಗಿದ್ದು ಕಡಬದಲ್ಲೂ ಬಿಜೆಪಿ
ಸುಳ್ಯ ಮಂಡಲದ ವತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ನ.4 ರಂದು ಪ್ರತಿಭಟನೆ ನಡೆಯಿತು.
ಸಾಮಾಜಿಕ
ಜಾಲತಾಣದ ಮೂಲಕ ಆರಂಭದಲ್ಲಿ ಕಡಬದಲ್ಲಿ “ರೈತರ ,ದಲಿತರ, ಮಠ ದೇವಸ್ಥಾನಗಳ ಆಸ್ತಿ ಕಬಳಿಕೆ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ” ಎಂದು ಪೋಸ್ಟರ್ ಹಂಚಿ ಪ್ರಚಾರ ಪಡಿಸಲಾಗಿತ್ತು. ಪ್ರತಿಭಟನೆ ವೇಳೆ “ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ
ಲ್ಯಾಂಡ್ ಜಿಹಾದ್ ಹಾಗೂ ವಕ್ಘ್ ಅಕ್ರಮ” ಹೆಸರಿನಡಿ
ಬ್ಯಾನರ್ ಪ್ರದರ್ಶಿಸಿ ಪ್ರತಿಭಟಿಸಿದರು. ರಾಕೇಶ್ ರೈ ಕೆಡೆಂಜಿ, ಕೃಷ್ಣ ಶೆಟ್ಟಿ ಕಡಬ,ಅಶಾ ತಿಮ್ಮಪ್ಪ
ಗೌಡ ಮೊದಲಾದವರು ಮಾತನಾಡಿದರು. ರಾಜ್ಯ ಸರ್ಕಾರದ ವಿರುದ್ದ ಕಾರ್ಯಕರ್ತರು ಘೋಷಣೆ ಕೂಗಿದರು.


ಕಡಬ
ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿ ರೈತರ ಜಮೀನುಗಳ ಪಹಣಿಗಳಲ್ಲಿ ಅಕ್ರಮವಾಗಿ ವಕ್ ಜಮೀನು
ಎಂದು -ನಮೂದಿಸಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದರ ಕುರಿತು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ
ಕಾಂಗ್ರೆಸ್ ಸರಕಾರವು ಎಲ್ಲಾ ರೀತಿಯಿಂದಲೂ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಇದೀಗ ರಾಜ್ಯದ ಅನೇಕ ಜಿಲ್ಲೆಗಳ ರೈತರ ಪಹಣಿಗಳಲ್ಲಿ ಏಕಾಏಕಿಯಾಗಿ
“ವಕ್ಸ್ ಆಸ್ತಿ, ಪರಭಾರೆ ನಿಷೇಧಿಸಿದೆ” ಎಂದು ನಮೂದಿಸುವ ಮೂಲಕ ಸಾವಿರಾರು ರೈತರ ಬದುಕಿನಲ್ಲಿ
ಚೆಲ್ಲಾಟವಾಡುತ್ತಿದೆ. ಇದು ಪ್ರಜಾತಂತ್ರ ವಿರೋಧಿಯಾಗಿದ್ದು ರಾಜ್ಯದ ರೈತರ ಹಾಗೂ ಜನಸಾಮಾನ್ಯರ ಬದುಕನ್ನು ಅತಂತ್ರ ಮಾಡುವ
ಈ ಕೃತ್ಯದ ಹಿಂದೆ ಷಡ್ಯಂತ್ರ ಅಡಗಿರುವಂತೆ ಕಾಣುತ್ತಿದೆ. ರಾಜ್ಯದ ಕಾಂಗ್ರೆಸ್
ಸರಕಾರದ ಅತಿಯಾದ ಅಲ್ಪಸಂಖ್ಯಾತರ ಓಲೈಕೆ ನೀತಿಯು ರಾಜ್ಯದಲ್ಲಿ ಅರಾಜಕತೆಗೆ ಕಾರಣವಾಗಲಿದೆ. ಕೂಡಲೇ
ಮದ್ಯಪ್ರವೇಶಿಸಿ, ಈ ನೀತಿಯನ್ನು ಕೈಬಿಡುವಂತೆ ಹಾಗೂ
ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಸಚಿವ ಜಮೀರ್ ಅಹ್ಮದ್‌ರವರನ್ನು ಸಂಪುಟದಿಂದ ಕೈಬಿಡುವಂತೆ
ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಪ್ರತಿಭಟನೆ
ವೇಳೆ ಕಡಬದ ಬಿಜೆಪಿ ಮುಖಂಡರು,ಕಾರ್ಯಕ್ರತರು, ಸುಳ್ಯ
ಮಂಡಲದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

