![]() ![]() |
ಅಪಘಾತವಾಗಿರುವ ವಾಹನದ ಮೇಲೆ ಕುಳಿತಿರುವ ಕೋಳಿ |


ಕಡಬ: ಕೋಡಿಂಬಾಳ ಸಮೀಪ ಚಲಿಸುತ್ತಿದ್ದ ಸ್ಕೂಟಿಯ
ಮೇಲೆ ದೂಪದ ಮರ ಬಿದ್ದು ಬೈಕ್ ಸವಾರ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಅವರು ಮೃತಪಟ್ಟು
2 ದಿನ ಕಳೆದಿದೆ. ಈ ಘಟನೆಯ
ಭೀಕರತೆಗೆ ಸಾಕ್ಷಿಯಾಗಿ ಅಪಘಾತಗೊಂಡ ಸ್ಕೂಟಿ ಮತ್ತು
ಕೋಳಿ ಸ್ಥಳದಲ್ಲೇ ಇದ್ದು ಹರಕೆ ಹೆಸರಿನಲ್ಲಿ ಬಲಿಯಾಗ ಬೇಕಿದ್ದ
ಕೋಳಿ ಈ ದುರ್ಘಟನೆಯಲ್ಲಿ ಜೀವಂತವಾಗಿ ಪಾರಾಗಿ ಅಲ್ಲೇ ಬಾಕಿಯಾಗಿದೆ.


ಕೋಳಿ
ಪಕ್ಕದ ಮರದ ಕೊಂಬೆಯಲ್ಲಿ , ಕೆಲವೊಮ್ಮೆ ಸ್ಕೂಟಿಯಲ್ಲಿ
ಕುಳಿತು ಅತ್ತಿತ್ತ ನೋಡುತ್ತಿದೆ. “ಕೋರಿಗ್ ನೆನಪಂದಿ
ಮರಣ” ( ಕೋಳಿಗೆ ಅನೀರಿಕ್ಷಿತ ಮರಣ ) ಎಂಬ ತುಳುವರ
ಮಾತು ಜನಜನಿತ. ಆದರೆ ಕೋಳಿ ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮರಬಿದ್ದು ಸ್ಥಳದಲ್ಲೇ ಮೃತಪಟ್ಟ
ಘಟನೆ ಜನರ ಮನಸ್ಸನ್ನೇ ಘಾಸಿಗೊಳಿಸಿದೆ. ಈ ನಡುವೆ ಅಪಘಾತವಾದ ಸ್ಥಳದಲ್ಲಿ ನುಜ್ಜು ಜುಜ್ಜಗಿರುವ ದ್ವಿಚಕ್ರ
ವಾಹನದ ಮೇಲೆ ಹರಕೆಗಾಗಿ ಕೊಂಡೊಯ್ಯುತ್ತಿದ್ದ ಕೋಳಿ
ಮೂಕವಾಗಿ ರೋಧಿಸುತ್ತಿದೆ.
ಕುಟುಂಬದ
ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆ ಬೆಳಿಗ್ಗೆ ಕೋಳಿ
ತರಲು ಕೋಡಿಂಬಾಳಕ್ಕೆ ಬಂದಿದ್ದವರು ಕೋಳಿಯನ್ನು ತೆಗೆದುಕೊಂಡು ಕಡಬ-ಪಂಜ ಡಾಮಾರು ರಸ್ತೆಯಲ್ಲಿ ತನ್ನ
(KA21 Y7243 ) ದ್ವಿಚಕ್ರ ವಾಹನದಲ್ಲಿ ವಾಪಸ್ಸು ಮನೆಗೆ ಹೋಗುತ್ತಿರುವಾಗ
ಮುರಚಡಾವು ಎಂಬಲ್ಲಿ ರಕ್ಷಿತಾರಣ್ಯದಿಂದ ಹಾಲು ಮಡ್ಡಿ
ತೆಗೆದ ಬುಡ ಶಿಥಿಲಗೊಂಡು ಅಪಾಯಕಾರಿಯಾಗಿದ್ದ ದೂಪದ
ಮರವು ಆಕಸ್ಮಿಕವಾಗಿ ಬಿದ್ದಿತ್ತು.


ಸೀತರಾಮರವರು ಚಲಾಯಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನದ
ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು . ಈ ಬಗ್ಗೆ ಕಡಬ ಪೊಲೀಸ್ ಠಾಣಾ ಯು ಡಿ ಆರ್
ನಂಬ್ರ 38/2024 ಕಲಂ:194(3), (iv) BNSS-2023ಯಂತೆ ಪ್ರಕರಣ ದಾಖಲಾಗಿದೆ.