ಕಡಬ: ಕಟ್ಟಡದ ಮೇಲ್ಬಾಗದಲ್ಲಿ ದೀಪಾವಳಿ ಸಂದರ್ಭ ಅಳವಡಿಸಿದ್ದ ವಿದ್ಯುತ್ ದೀಪಗಳನ್ನು ತೆರವು ಮಾಡಲು ಮುಂದಾದ ವೇಳೆ ಪಕ್ಕದಲ್ಲೇ ಹಾದು ಹೋಗಿದ್ದ ಹೈ ಟೆನ್ಷನ್ ವಿದ್ಯುತ್ ಲೈನ್ ಶಾಕ್ ಗೆ ಒಳಗಾಗಿ ವ್ಯಕ್ತಿಯೊಬ್ಬರು ಗಂಭೀರವಾಗಿ ಸುಟ್ಟ ಗಾಯದೊಂದಿಗೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಕಡಬದಲ್ಲಿ ನಡೆದಿದೆ.
ಕಡಬ- ಪಂಜ ರಸ್ತೆಯ ಜಂಕ್ಷನ್ ನಲ್ಲಿರುವ ಸಿಎ ಬ್ಯಾಂಕ್ ಅಧೀನದಲ್ಲಿರುವ ಯೋಗಕ್ಷೇಮ ಸಂಕೀರ್ಣದಲ್ಲಿರುವ ಸಿದ್ದಿ ಟೆಕ್ಸ್ ಟೈಲ್ ಬಟ್ಟೆ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಕೇಶ್ ಚೌದ್ರಿ ಎಂಬವರು ವಿದ್ಯುತ್ ಶಾಕ್ ತಗುಲಿ ಗಂಭೀರವಾಗಿ ಗಾಯಗೊಂಡವರು.
ಬಟ್ಟೆ ಮಳಿಗೆ ಹೊಂದಿದ್ದ ಕಟ್ಟಡದ ಮೇಲ್ಬಾದಲ್ಲಿ ದೀಪಾವಳಿ ಸಂಭ್ರಮದ ಹಿನ್ನಲೆ ಮಳಿಗೆಯನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿದ್ದರು. ಅದನ್ನು ಕಬ್ಬಿಣದ ಕೋಲಿನಿಂದ ತೆರವುಗೊಳಿಸುವ ವೇಳೆ ಕಟ್ಟಡ ಮೇಲ್ಬಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ಶಾಕ್ ಹೊಡೆದಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ಶಾಕ್ ತಗಲುವ ವೇಳೆ ಭಾರೀ ಸದ್ದು ಕೇಳಿ ಸುತ್ತ ಮುತ್ತಲಿನ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ವಿದ್ಯುತ್ ಶಾಕ್ ನಿಂದ ಸುಟ್ಟ ಗಾಯಗೊಂದಿಗೆ ಅಸ್ವಸ್ಥರಾಗಿ ಬಿದ್ದಿದ್ದ ಅಂಗಡಿ ಮಾಲಕನ್ನು ಸ್ಥಳೀಯರ ನೆರವಿನೊಂದಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
SK SSF ಅಂಬ್ಯುಲೆನ್ಯ್ ಚಾಲಕ 55 ನಿಮಿಷದಲ್ಲಿ ಮಂಗಳೂರು ಆಸ್ಪತ್ರೆಗೆ ಮುಟ್ಟಿಸುವ ಮೂಲಕ ಜೀವ ಉಳಿಸಲು ಯತ್ನಿಸಿದ್ದಾರೆ. ಸ್ಥಳೀಯ ಸಮಾಜ ಸೇವಕರೂ ಜೊತೆಗೆ ತೆರಳಿರುವುದಾಗಿ ಮಾಹಿತಿ ಲಭಿಸಿದೆ.ಹೆಚ್ಚಿನ ಮಾಹಿತಿ ಅಪ್ ಡೇಟ್ ಮಾಡಲಾಗುವುದು.