ಕಡಬ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸಮೀಪ ನಡೆದಿದೆ.
ಮೃತ ಪಟ್ಟ ಸ್ಕೂಟಿ ಸವಾರ ಎಡಮಂಗಲದ ಸೊಸೈಟಿವೊಂದರಲ್ಲಿ ಪಿಗ್ಮಿ ಸಂಗ್ರಹಕಾರರಾಗಿದ್ದ ದೇವಸ್ಯ ನಿವಾಸಿ ಸೀತಾರಾಮ (58ವ )ಎಂದು ಗುರುತಿಸಲಾಗಿದೆ.
ಶನಿವಾರ ಮುಂಜಾನೆ ಮನೆಯಿಂದ ಕಡಬದತ್ತ ಆಗಮಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪಂಜ ಕಡಬ ರಸ್ತೆಯ ಮೊರಚೆಡವು ಬಳಿ ರಸ್ತೆ ಬದಿಯಲ್ಲಿದ್ದ ದೂಪದ ಮರ ಬಿದ್ದಿರುವುದಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ. ಹಾಗು ಹಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.