23 C
Kadaba
Monday, March 31, 2025

ಹೊಸ ಸುದ್ದಿಗಳು

ನಮ್ಮ ಕಡಬಕ್ಕೆ ಹೆಮ್ಮೆ: ಬಪ್ಪನಾಡು ಮೇಳದ ಸ್ತೀ ಪಾತ್ರಧಾರಿ ಕಡಬ ಶ್ರೀನಿವಾಸ ರೈ ಸಹಿತ 55 ಮಂದಿ ಸಾಧಕರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

ಕಡಬ: ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈ  ಸಹಿತ 55 ಮಂದಿ ಸಾಧಕರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊತೆಗೆ 20 ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಕಡಬ ಶ್ರೀನಿವಾಸ ರೈ ಅವರು ಮರ್ದಾಳ ಸಮೀಪದ ಕೊಡಂದೂರು ರಾಮಣ್ಣ ರೈ ಮತ್ತು ಕುಸುಮಾವತಿ ದಂಪತಿ ಪುತ್ರ.ಕರ್ನಾಟಕ ಮೇಳದಲ್ಲಿ 5 ವರ್ಷ , ಪುತ್ತೂರು ಮೇಳದಲ್ಲಿ 2 ವರ್ಷ, ಕದ್ರಿಮೇಳದಲ್ಲಿ 2 ವರ್ಷ,ಮಂಗಳದೇವಿ ಮೇಳದಲ್ಲಿ 7 ವರ್ಷ ,ಇದೀಗ ಬಪ್ಪನಾಡು ಮೇಳದಲ್ಲಿ ಇವರ ಸೇವೆ ಮುಂದುವರೆಸುತ್ತಿದ್ದಾರೆ.
 ಕಾಡ ಮಲ್ಲಿಗೆ,ಎಲ್ಲೂರ್ದ ಮಲ್ಲಿ ,ಕಚ್ಚೂರ ಮಲ್ದಿ ಇವರಿಗೆ ಹೆಸರು ತಂದುಕೊಟ್ಟ ಯಕ್ಷಗಾನಗಳು.
ನ.1ರಂದು ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ಪೀಕರ್ ಯು.ಟಿ.ಖಾದರ್ ಅವರ ಸಮ್ಮುಖ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಪ್ರದಾನಿಸಲಿದ್ದಾರೆ.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.