ಕಡಬ ಪ.ಪಂ ವ್ಯಾಪ್ತಿ: ತೋಡು ಬ್ಲಾಕ್,ಮನೆಯೊಳಗೆ ನುಗ್ಗಿದ ಮಳೆ ನೀರು

kadaba times

ಕಡಬ :ಭಾರೀ ಮಳೆಗೆ ಮನೆಯೊಳಗೆ ನೀರು ನುಗ್ಗಿ ಮನೆ ಗೋಡೆ   ಬಿರುಕುಬಿಟ್ಟ ಘಟನೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಣೆಮಜಲು ವಾರ್ಡಿನಿಂದ ವರದಿಯಾಗಿದೆ.

kadaba times
uniq

ಕಳಾರ ನಿವಾಸಿ ಜೈನಾಬಿ ಎಂಬವರ ಮನೆ ಇದಾಗಿದ್ದು  ಇಂದು ನಿರಂತರವಾಗಿ ಸುರಿದ  ಧಾರಾಕಾರ ಮಳೆಗೆ  ತೋಡಿನ ನೀರು ಮನೆಯೊಳಗೆ  ನುಗ್ಗಿದೆ.  ಮನೆ ಪಕ್ಕದ ಜಾಗವನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದು  ಅಲ್ಲಿ   ಚರಂಡಿ ನೀರು ಹರಿದು ಹೋಗುವ ತೋಡಿಗೆ ಸಣ್ಣ ಮೋರಿ ಅಳವಡಿಸಿದ ಕಾರಣ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲವೆಂದು ಹೇಳಲಾಗಿದೆ.  

kadaba times
kadaba times

ಮನೆಯೊಳಗೆ ನೀರು ನುಗ್ಗಿದ ಕಾರಣ  ಮಣ್ಣಿನ ಗೋಡೆ ಬಿರುಕು ಬಿಟ್ಟಿದ್ದು ಮನೆ ಮಂದಿ   ಬೀಳುವ ಆತಂಕ ವ್ಯಕ್ತಪಡಿಸಿದ್ದಾರೆ. ಮನೆ ಕುಸಿದು ಬೀಳುವ ಭೀತಿಯಲ್ಲಿ ಮನೆ ಮಂದಿ ಸ್ಥಳೀಯ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.  ಕೂಡಲೇ ಪ.ಪಂ ಅಧಿಕಾರಿಗಳು  ಸೂಕ್ತ ಕ್ರಮ ಕೈಗೊಳಬ್ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related Articles

Latest Articles