
ಕಡಬ :ಭಾರೀ ಮಳೆಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಣೆಮಜಲು ವಾರ್ಡಿನ ಕಳಾರ ನಿವಾಸಿ ಜೈನಾಬಿ ಎಂಬವರ ಮನೆಯೊಳಗೆ ನೀರು ನುಗ್ಗಿ ಮನೆ ಗೋಡೆ ಬಿರುಕುಬಿಟ್ಟತ್ತು.



ಈ ಬಗ್ಗೆ ಕಡಬ ಟೈಮ್ಸ್ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ರಾತ್ರಿಯೇ ಕಂದಾಯ ಇಲಾಖೆಯ ಗ್ರಾಮ ಸಹಾಯಕರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲಿಸಿದ್ದಾರೆ ಜೊತೆಗೆ ಪ.ಪಂ ವಾರ್ಡು ಸದಸ್ಯ ರೋಹಿತ್ ಭೇಟಿ ನೀಡಿದ್ದಾರೆ.
ಇನ್ನು ಗುರುವಾರ ಮುಂಜಾನೆ ಗ್ರಾಮಕರಣಿಕ ಅವರು ನಿಶ್ಮಿತಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಾಘವ ಕಳಾರ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು.




ಬುಧವಾರ ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ತೋಡಿನ ನೀರು ಮನೆಯೊಳಗೆ ನುಗ್ಗಿತ್ತು . ಮನೆ ಪಕ್ಕದ ಜಾಗವನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದು ಅಲ್ಲಿ ಚರಂಡಿ ನೀರು ಹರಿದು ಹೋಗುವ ತೋಡಿಗೆ ಸಣ್ಣ ಮೋರಿ ಅಳವಡಿಸಿದ ಕಾರಣ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲವೆಂದು ಹೇಳಲಾಗಿದೆ.
ಮನೆಯೊಳಗೆ ನೀರು ನುಗ್ಗಿದ ಕಾರಣ ಮಣ್ಣಿನ ಗೋಡೆ ಬಿರುಕು ಬಿಟ್ಟಿದ್ದು ಮನೆ ಮಂದಿ ಬೀಳುವ ಆತಂಕ ಎದುರಾಗಿತ್ತು . ಹೀಗಾಗಿ ಮನೆ ಕುಸಿದು ಬೀಳುವ ಭೀತಿಯಲ್ಲಿ ಮನೆ ಮಂದಿ ಸ್ಥಳೀಯ ಮನೆಯಲ್ಲಿ ಆಶ್ರಯ ಪಡೆದಿದ್ದರು .
