
ಕಡಬ :ಭಾರೀ ಮಳೆಗೆ ಮನೆಯೊಳಗೆ ನೀರು ನುಗ್ಗಿ ಮನೆ ಗೋಡೆ ಬಿರುಕುಬಿಟ್ಟ ಘಟನೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಣೆಮಜಲು ವಾರ್ಡಿನಿಂದ ವರದಿಯಾಗಿದೆ.


ಕಳಾರ ನಿವಾಸಿ ಜೈನಾಬಿ ಎಂಬವರ ಮನೆ ಇದಾಗಿದ್ದು ಇಂದು ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ತೋಡಿನ ನೀರು ಮನೆಯೊಳಗೆ ನುಗ್ಗಿದೆ. ಮನೆ ಪಕ್ಕದ ಜಾಗವನ್ನು ವ್ಯಕ್ತಿಯೊಬ್ಬರು ಖರೀದಿಸಿದ್ದು ಅಲ್ಲಿ ಚರಂಡಿ ನೀರು ಹರಿದು ಹೋಗುವ ತೋಡಿಗೆ ಸಣ್ಣ ಮೋರಿ ಅಳವಡಿಸಿದ ಕಾರಣ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲವೆಂದು ಹೇಳಲಾಗಿದೆ.


ಮನೆಯೊಳಗೆ ನೀರು ನುಗ್ಗಿದ ಕಾರಣ ಮಣ್ಣಿನ ಗೋಡೆ ಬಿರುಕು ಬಿಟ್ಟಿದ್ದು ಮನೆ ಮಂದಿ ಬೀಳುವ ಆತಂಕ ವ್ಯಕ್ತಪಡಿಸಿದ್ದಾರೆ. ಮನೆ ಕುಸಿದು ಬೀಳುವ ಭೀತಿಯಲ್ಲಿ ಮನೆ ಮಂದಿ ಸ್ಥಳೀಯ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕೂಡಲೇ ಪ.ಪಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳಬ್ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
