ಕಡಬ ಸಂತೆ ಕಟ್ಟೆ ಬಳಿ ಬೈಕ್ ಗಳ ನಡುವೆ ಅಪಘಾತ; ನಿವೃತ್ತ ದೈಹಿಕ ಶಿಕ್ಷಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

kadaba times

ಕಡಬ:ಕಡಬ ಪೇಟೆಯ ಕಡಬ-ಉಪ್ಪಿನಂಗಡಿ ಮುಖ್ಯ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಟಿಎಂ ಮುಂಭಾಗ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ್ದು, ನಿವೃತ್ತ ದೈಹಿಕ ಶಿಕ್ಷಕರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

kadaba times
uniq

ಕಡಬ ಕಾಲೇಜು ರಸ್ತೆಯ ಗ್ರೀನ್ ಪಾರ್ಕ್ ನಿವಾಸಿ, ನಿವೃತ್ತ ದೈಹಿಕ ಶಿಕ್ಷಕ ಗಣೇಶ್ ಪಿ. (63) ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ.

ಎಟಿಎಂ ಬಳಿ ತಿರುಗುತ್ತಿದ್ದ ವೇಳೆ ಅಪ್ಪಳಿಸಿದ  ಬೈಕ್:ಸೆ 4ರ ಸಂಜೆ  ಗಣೇಶ್ ಪಿ. ಅವರು ಹಣ ಡ್ರಾ ಮಾಡುವ ಉದ್ದೇಶದಿಂದ ತಮ್ಮ  ಬೈಕ್‌ನಲ್ಲಿ  ಕಡಬ ಮುಖ್ಯ ರಸ್ತೆಯ ಎಸ್‌ಬಿಐ ಎಟಿಎಂ ಕಡೆಗೆ ತೆರಳುತ್ತಿದ್ದರು.ಎಟಿಎಂ ಕಟ್ಟಡದ ಬಳಿ ರಸ್ತೆಯ ಬಲಬದಿಗೆ ತಿರುಗಿಸಲು ಅವರು ಬಲಬದಿಯ ಇಂಡಿಕೇಟರ್ ಹಾಕಿ, ಕೈ ಸನ್ನೆ ಮಾಡುತ್ತಾ ತಿರುಗುತ್ತಿದ್ದ ಸಂದರ್ಭದಲ್ಲಿ, ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ  ಮೋಟಾರ್ ಸೈಕಲ್  ಗಣೇಶ್ ಅವರ ಬೈಕಿನ ಬಲಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.

ರಸ್ತೆಗೆ ಬಿದ್ದು ರಕ್ತಗಾಯ – ಉಜಿರೆ ಆಸ್ಪತ್ರೆಗೆ ಶಿಫ್ಟ್:

kadaba times
kadaba times

ಡಿಕ್ಕಿಯ ರಭಸಕ್ಕೆ ಗಣೇಶ್ ಅವರು ಬೈಕ್ ಸಮೇತ ಡಾಂಬರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮವಾಗಿ ಅವರ ಎಡಗಾಲು, ಎಡ ಮೊಣಗಂಟು, ಎಡಗೈ, ಕುತ್ತಿಗೆ ಹಾಗೂ ತಲೆಯ ಎಡಭಾಗಕ್ಕೆ ರಕ್ತಗಾಯಗಳಾಗಿದ್ದು, ಮೂಗಿಗೆ ಬಲವಾದ ಪೆಟ್ಟು ಬಿದ್ದಿದೆ. ಅಪಘಾತದಲ್ಲಿ ಎರಡೂ ಮೋಟಾರ್ ಸೈಕಲ್‌ಗಳು ಜಖಂಗೊಂಡಿದ್ದು, ಜಾವಾ ಸವಾರನಿಗೂ ತರಚಿದ ಗಾಯಗಳಾಗಿವೆ ಎನ್ನಲಾಗಿದೆ.

ತಕ್ಷಣವೇ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳುಸಾರ್ವಜನಿಕರ ನೆರವಿನೊಂದಿಗೆ ಗಾಯಾಳು ಗಣೇಶ್ ಅವರನ್ನು ಆಟೋರಿಕ್ಷಾದಲ್ಲಿ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಖಾಸಗಿ  ಆಸ್ಪತ್ರೆಗೆ ಕರೆದೊಯ್ದು ಒಳರೋಗಿಯಾಗಿ ದಾಖಲಿಸಲಾಗಿದೆ.

ಕಡಬ ಠಾಣೆಯಲ್ಲಿ ಕೇಸ್ ದಾಖಲು: ಅಪಘಾತಕ್ಕೆ ಕಾರಣವಾದ  ಬೈಕ್ ಸವಾರನ ವಿರುದ್ಧ ಗಣೇಶ್ ಪಿ. ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿಅಪರಾಧ ಸಂಖ್ಯೆ: 106/2026 ಕಲಂಗಳು: 281 (ಅಜಾಗರೂಕ ಚಾಲನೆ), 125(a) (ಇತರರ ಜೀವಕ್ಕೆ ಅಪಾಯ ತರುವಂತೆ ವರ್ತಿಸಿ ಗಾಯಗೊಳಿಸುವುದು) BNS-2023 ಅಡಿಯಲ್ಲಿ ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ.

Related Articles

Latest Articles