
ಪಶ್ಚಿಮ ಘಟ್ಟದ ಸಿರಿಬಾಗಿಲು ಮತ್ತು ಯಡಕುಮರಿ ರೈಲು ನಿಲ್ದಾಣಗಳ ನಡುವೆ ಹಳಿ ನಿರ್ವಹಣೆ ಹಾಗೂ ಇಂಜಿನಿಯರಿಂಗ್ ಕಾಮಗಾರಿಗಳು ನಡೆಯಲಿರುವುದರಿಂದ, ಅಕ್ಟೋಬರ್ 4 ರಿಂದ ನವೆಂಬರ್ 4 ರವರೆಗೆ ಯಶವಂತಪುರ, ಮಂಗಳೂರು ಜಂಕ್ಷನ್ ಹಾಗೂ ಕಾರವಾರ ನಡುವೆ ಸಂಚರಿಸುವ ಹಲವು ಪ್ರಮುಖ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆಯು ರದ್ದುಗೊಳಿಸಿದೆ.


ಬೆಂಗಳೂರು / ಮಂಗಳೂರು: ಪಶ್ಚಿಮ ಘಟ್ಟದ ಸಿರಿಬಾಗಿಲು ಹಾಗೂ ಯಡಕುಮರಿ ರೈಲು ನಿಲ್ದಾಣಗಳ ನಡುವೆ ಹಳಿ ನಿರ್ವಹಣೆ ಮತ್ತು ಅಗತ್ಯ ಇಂಜಿನಿಯರಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ಅಕ್ಟೋಬರ್ 4 ರಿಂದ ನವೆಂಬರ್ 4 ರವರೆಗೆ ಕರಾವಳಿ ಹಾಗೂ ರಾಜಧಾನಿ ಬೆಂಗಳೂರು ನಡುವೆ ಸಂಚರಿಸುವ ಹಲವು ಪ್ರಮುಖ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಈ ಕುರಿತು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ರದ್ದಾಗಿರುವ ರೈಲುಗಳು ಹಾಗೂ ದಿನಾಂಕಗಳ ವಿವರ:
1. ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 16575)
-
ವಾರದ ದಿನಗಳು: ವಾರದಲ್ಲಿ 3 ದಿನ
-
ರದ್ದಾದ ದಿನಾಂಕಗಳು: ಅಕ್ಟೋಬರ್ 4, 6, 8, 11, 13, 15, 22, 25, 27, 29 ಮತ್ತು ನವೆಂಬರ್ 1, 3.
2. ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 16576)
-
ವಾರದ ದಿನಗಳು: ವಾರದಲ್ಲಿ 3 ದಿನ
-
ರದ್ದಾದ ದಿನಾಂಕಗಳು: ಅಕ್ಟೋಬರ್ 5, 7, 9, 12, 14, 16, 23, 26, 28, 30 ಮತ್ತು ನವೆಂಬರ್ 2, 4.
3. ಯಶವಂತಪುರ – ಕಾರವಾರ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 16515)
-
ವಾರದ ದಿನಗಳು: ವಾರದಲ್ಲಿ 3 ದಿನ


-
ರದ್ದಾದ ದಿನಾಂಕಗಳು: ಅಕ್ಟೋಬರ್ 5, 7, 9, 12, 14, 21, 23, 26, 28, 30 ಮತ್ತು ನವೆಂಬರ್ 2.
4. ಕಾರವಾರ – ಯಶವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 16516)
-
ವಾರದ ದಿನಗಳು: ವಾರದಲ್ಲಿ 3 ದಿನ
-
ರದ್ದಾದ ದಿನಾಂಕಗಳು: ಅಕ್ಟೋಬರ್ 6, 8, 10, 13, 15, 22, 24, 27, 29, 31 ಮತ್ತು ನವೆಂಬರ್ 3.
5. ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 16539)
-
ರದ್ದಾದ ದಿನಾಂಕಗಳು: ಅಕ್ಟೋಬರ್ 10, 24 ಮತ್ತು 31.
6. ಮಂಗಳೂರು ಜಂಕ್ಷನ್ – ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 16540)
-
ರದ್ದಾದ ದಿನಾಂಕಗಳು: ಅಕ್ಟೋಬರ್ 11, 25 ಮತ್ತು ನವೆಂಬರ್ 1.
ರೈಲ್ವೆ ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಸಂಚಾರದಲ್ಲಿ ಬದಲಾವಣೆ ಉಂಟಾಗಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಮುಂಚಿತವಾಗಿ ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ಪರಿಶೀಲಿಸಿಕೊಂಡು ಸಹಕರಿಸಬೇಕಾಗಿ ನೈರುತ್ಯ ರೈಲ್ವೆ ಕೋರಿದೆ.
