Drunk and Drive-ಕುಡಿದು ವಾಹನ ಚಾಲನೆ: ಕಡಬದ ಇಬ್ಬರ ಡ್ರೈವಿಂಗ್ ಲೈಸೆನ್ಸ್ 3 ತಿಂಗಳು ಕ್ಯಾನ್ಸಲ್

kadaba times

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರ ವಿರುದ್ಧ ಕಡಬ ಪೊಲೀಸರು ನೀಡಿದ ವರದಿ ಆಧಾರಿಸಿ, ಪುತ್ತೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (RTO) ವಿಶ್ವನಾಥ್ ಅಜಿಲ ಅವರು ಇಬ್ಬರು ಚಾಲಕರ ಡ್ರೈವಿಂಗ್ ಲೈಸೆನ್ಸ್ ಅನ್ನು 3 ತಿಂಗಳ ಅವಧಿಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಕಡಬ / ಪುತ್ತೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವ ಸವಾರರ ವಿರುದ್ಧ ಕಡಬ ಪೊಲೀಸ್ ಠಾಣೆ ಹಾಗೂ ಪುತ್ತೂರು ಸಾರಿಗೆ ಇಲಾಖೆ (RTO) ಜಂಟಿಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಿಯಮ ಉಲ್ಲಂಘಿಸಿದ ಚಾಲಕರ ಚಾಲನಾ ಪರವಾನಗಿಯನ್ನು (DL) 3 ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿದೆ.

kadaba times
uniq

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಲಾದ ತನಿಖಾ ತಪಾಸಣೆ ವೇಳೆ ಮದ್ಯಪಾನ ಮಾಡಿ ಚಾಲನೆ ಮಾಡಿ ಸಿಕ್ಕಿಬಿದ್ದಿದ್ದ ಬಿಳಿನೆಲೆ ಹಾಗೂ ಮಾರ್ಧಾಳ ಮೂಲದ ಚಾಲಕರ ವಿರುದ್ಧ ಕಡಬ ಪೊಲೀಸರು ಸೂಕ್ತ ತನಿಖಾ ವರದಿ ತಯಾರಿಸಿ ಪುತ್ತೂರು ಆರ್‌ಟಿಒ ಕಚೇರಿಗೆ ರವಾನಿಸಿದ್ದರು.

ಮೂರು ತಿಂಗಳು ಚಾಲನೆ ನಿಷೇಧ: ಕಡಬ ಪೊಲೀಸರು ಕಳುಹಿಸಿದ ವರದಿಯನ್ನು ಪರಿಶೀಲಿಸಿದ ಪುತ್ತೂರು ಆರ್‌ಟಿಒ ಹಿರಿಯ ಮೋಟಾರು ವಾಹನ ನಿರೀಕ್ಷಕರು ಹಾಗೂ ಪರವಾನಗಿ ಪ್ರಾಧಿಕಾರ ಅಧಿಕಾರಿ ವಿಶ್ವನಾಥ್ ಅಜಿಲ ಅವರು ಮೋಟಾರು ವಾಹನ ಕಾಯ್ದೆ 1988ರ ಕಲಂ 19(1) ರಡಿ ನೋಟಿಸ್ ಜಾರಿಗೊಳಿಸಿ, ಚಾಲಕರ ಸಮಜಾಯಿಷಿ ಆಲಿಸಿದ ಬಳಿಕ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಬಿಳಿನೆಲೆ ಗ್ರಾಮದ ನಿವಾಸಿಯೊಬ್ಬರ ಡ್ರೈವಿಂಗ್ ಲೈಸೆನ್ಸ್ ಅನ್ನು 2026 ಜೂನ್ 23 ರಿಂದ 2026 ಸೆಪ್ಟೆಂಬರ್ 23 ರವರೆಗೆ (3 ತಿಂಗಳು) ಅಮಾನತುಗೊಳಿಸಲಾಗಿದೆ. ಮಾರ್ಧಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಕ್ಕಿಲಾಡಿ ನಿವಾಸಿಯೊಬ್ಬರ ಡ್ರೈವಿಂಗ್ ಲೈಸೆನ್ಸ್ ಅನ್ನು 2026 ಜುಲೈ 20 ರಿಂದ 2026 ಅಕ್ಟೋಬರ್ 20 ರವರೆಗೆ (3 ತಿಂಗಳು) ಅಮಾನತುಗೊಳಿಸಲಾಗಿದೆ.

kadaba times
kadaba times

ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ಸಾರ್ವಜನಿಕ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಮುಂದಿನ ದಿನಗಳಲ್ಲಿಯೂ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಚಾಲನಾ ಪರವಾನಗಿಯನ್ನು ರದ್ದುಗೊಳಿಸುವ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವ ಮುನ್ನೆಚ್ಚರಿಕೆಯನ್ನು ಕಡಬ ಪೊಲೀಸರು ಹಾಗೂ ಸಾರಿಗೆ ಇಲಾಖಾಧಿಕಾರಿಗಳು ನೀಡಿದ್ದಾರೆ.

 

KADABA TIMES NEWS
KADABA TIMES NEWShttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಮಾಧ್ಯಮವಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ದ.ಕ ಜಿಲ್ಲೆಯ ಪ್ರಮುಖ ಸುದ್ದಿಗಳು, ರಾಜ್ಯ,ದೇಶದ ಮಹತ್ವದ ಘಟನಾವಳಿಗಳನ್ನು ಸ್ಥಳೀಯರಿಗೆ ತಲುಪಿಸುತ್ತದೆ. ನಮ್ಮನ್ನು ಬೆಂಬಲಿಸಿ ಮತ್ತು ಪ್ರೋತ್ಸಾಹಿಸಿ. ನಿಮ್ಮೂರಿನ ಸುದ್ದಿ ಮಾಹಿತಿಗಳನ್ನು +91 93804 74819 ಗೆ ವಾಟ್ಸಪ್ ಮಾಡಿ.

Related Articles

Latest Articles