ಕಡಬ: ಪ.ಪಂ ಅಧ್ಯಕ್ಷೆಯ ಮನೆಯಿಂದಲೇ ಹಣ ಕಳ್ಳತನ :FIR ದಾಖಲು

kadaba times

ಕಡಬ: ಇಲ್ಲಿನ ಪ.ಪಂ ವ್ಯಾಪ್ತಿಯ  ಅಡ್ಡಗದ್ದೆ ಎಂಬಲ್ಲಿ ಮನೆಯೊಂದರ ರೂಮ್‌ನಲ್ಲಿದ್ದ ಮರದ ಬಾಕ್ಸ್ ಅನ್ನು ಒಡೆದು ಅದರಲ್ಲಿದ್ದ ₹84,800 ನಗದು ಹಣವನ್ನು ಕಳ್ಳರು ದೋಚಿರುವ ಘಟನೆ ನಡೆದಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

kadaba times
uniq

ಕಡಬ ಅಡ್ಡಗದ್ದೆ ನಿವಾಸಿ, ಪ.ಪಂ ಅಧ್ಯಕ್ಷೆ  ತಮನ್ನಾ ಜಬೀನ್ (43) ಹಣ ಕಳೆದುಕೊಂಡ ದೂರುದಾರೆ.

ಘಟನೆಯ ವಿವರ: ದೂರುದಾರೆ  ಕುಟುಂಬ ಸದಸ್ಯರೊಂದಿಗೆ ಕಡಬ ಅಡ್ಡಗದ್ದೆಯಲ್ಲಿರುವ ಗಂಡನ ಮನೆಯಲ್ಲಿ ವಾಸವಾಗಿದ್ದಾರೆ. ಇವರು  ಮಲಗುವ ಕೋಣೆಯಲ್ಲಿ (ರೂಮ್) ಇರಿಸಲಾಗಿದ್ದ ಮರದ ಬಾಕ್ಸ್‌ನಲ್ಲಿ ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು.

ದಿನಾಂಕ 18.08.2026 ರಂದು ಕಾರ್ಯಕ್ರಮವೊಂದರ ನಿಮಿತ್ತ ದೂರುದಾರರು ತಮ್ಮ ಗಂಡ ಹಾಗೂ ಮಕ್ಕಳೊಂದಿಗೆ ಉಡುಪಿಗೆ ತೆರಳಿದ್ದು, ಅದೇ ದಿನ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗಿದ್ದರು.

kadaba times
kadaba times

ಮರದ ಬಾಕ್ಸ್ ಒಡೆದು ಕಳ್ಳತನ: ದಿನಾಂಕ 24.08.2026 ರಂದು ದೂರುದಾರರು ಮರದ ಬಾಕ್ಸ್‌ನಲ್ಲಿದ್ದ ಹಣವನ್ನು ತೆಗೆಯಲು ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮರದ ಬಾಕ್ಸ್ ಅನ್ನು ಬಲವಂತವಾಗಿ ಒಡೆದ ರೀತಿಯಲ್ಲಿದ್ದು, ಅದರೊಳಗೆ ಸಂಗ್ರಹಿಸಿ ಇಟ್ಟಿದ್ದ ಬರೋಬ್ಬರಿ ₹84,800/- ನಗದು ಹಣ ಕಳವಾಗಿರುವುದು ಕಂಡುಬಂದಿದೆ.

ಕಡಬ ಠಾಣೆಯಲ್ಲಿ ಎಫ್‌ಐಆರ್ ದಾಖಲು:ಮನೆಯ ಕೊಠಡಿಯಲ್ಲಿದ್ದ ಮರದ ಬಾಕ್ಸ್ ಒಡೆದು ಹಣ ಕಳವು ಮಾಡಿರುವ ಕುರಿತು ತಮನ್ನಾ ಜಬೀನ್ ಅವರು ಕಡಬ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಅಪರಾಧ ಕ್ರಮಾಂಕ: 101/2026 ಕಲಂ: 305 BNS – 2023 (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Latest Articles