ಕೋಡಿಂಬಾಳ-ಐತ್ತೂರು ಉಭಯ ಗ್ರಾಮಗಳಲ್ಲಿ ಮರಿ ಆನೆ ಸಹಿತ ಕಾಡಾನೆಗಳ ಹಿಂಡು

kadaba times

ಬಳ್ಪ ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಮರಿ ಆನೆ ಸೇರಿದಂತೆ ಆರು ಕಾಡಾನೆಗಳ ಹಿಂಡು ಇದೀಗ ಕೋಡಿಂಬಾಳ ಗ್ರಾಮದ ಕೊರಿಯರ್ ಸಮೀಪದ ರಬ್ಬರ್ ತೋಟಕ್ಕೆ ಲಗ್ಗೆಯಿಟ್ಟಿದೆ. ಬೈನೆ ಮರಗಳನ್ನು ಧ್ವಂಸಗೊಳಿಸಿ, ನದಿ ದಾಟಿ ಬಂದಿರುವ ಆನೆಗಳ ಹಿಂಡಿನಿಂದಾಗಿ ಗ್ರಾಮಸ್ಥರು ಎಚ್ಚರದಿಂದಿರಲು ಸೂಚಿಸಲಾಗಿದೆ.

kadaba times
uniq

ಕಡಬ: ಬಳ್ಪ ಪರಿಸರದಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಪಕ್ಕದ ಕೋಡಿಂಬಾಳ ಗ್ರಾಮಕ್ಕೆ ಲಗ್ಗೆಯಿಟ್ಟಿದ್ದು,ಐತ್ತೂರು ಗ್ರಾಮದ  ಕೊರಿಯರ್ ಸಮೀಪದ ರಬ್ಬರ್ ತೋಟದಲ್ಲಿ ಬೀಡುಬಿಟ್ಟಿರುವುದು ಸ್ಥಳೀಯ ಕೃಷಿಕರು ಹಾಗೂ ಸಾರ್ವಜನಿಕರಲ್ಲಿ  ಭೀತಿ ಹುಟ್ಟಿಸಿದೆ.

ಒಂದು ಮರಿ ಆನೆ ಸೇರಿದಂತೆ ಒಟ್ಟು ಆರು ಕಾಡಾನೆಗಳು ಈ ಹಿಂಡಿನಲ್ಲಿರುವುದು ಕಂಡುಬಂದಿದೆ. ಮೊದಲಿಗೆ ಬಳ್ಪ ಗ್ರಾಮದ ಪಠೋಳಿ ಭಾಗದಲ್ಲಿ ಕಾಡಾನೆಗಳು ಸಂಚರಿಸಿದ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಬಳಿಕ ಪಠೋಳಿಯಿಂದ ಕಣ್ಕಲ್ ಭಾಗದತ್ತ ತೆರಳಿದ ಆನೆಗಳು, ದಾರಿಯುದ್ದಕ್ಕೂ ಬೈನೆ ಮರಗಳನ್ನು ಮುರಿದು ಹಾಕಿ ಹಾನಿಯುಂಟು ಮಾಡಿದ್ದವು.

ಅಲ್ಲಿಂದ ಮುಂದೆ ಸಾಗಿದ ಆನೆಗಳ ಹಿಂಡು ಎಣ್ಣೆಮಜಲು ಬಳಿಯ ಬೀರಿಕಾಡು ಪ್ರದೇಶದಲ್ಲಿ ಸಂಚರಿಸಿ, ನಂತರ ನದಿಯನ್ನು ದಾಟಿ ಕೋಡಿಂಬಾಳ ಗ್ರಾಮದ ಕೊರಿಯರ್ ಸಮೀಪವಿರುವ ರಬ್ಬರ್ ತೋಟಕ್ಕೆ ಪ್ರವೇಶಿಸಿ ಅಲ್ಲಿಯೇ ಠಿಕಾಣಿ ಹೂಡಿವೆ.ಐತ್ತೂರು ಮತ್ತು ಕೋಡಿಂಬಾಳ ಉಭಯ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ.

kadaba times
kadaba times

ಗ್ರಾಮಸ್ಥರಿಗೆ ಎಚ್ಚರಿಕೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ: ಜನವಸತಿ ಹಾಗೂ ಕೃಷಿ ತೋಟಗಳಿರುವ ಪ್ರದೇಶದಲ್ಲೇ ಕಾಡಾನೆಗಳು ಬೀಡುಬಿಟ್ಟಿರುವುದರಿಂದ ತೋಟದ ಕೆಲಸಗಳಿಗೆ ತೆರಳುವ ಕಾರ್ಮಿಕರು, ಕೃಷಿಕರು ಹಾಗೂ ಶಾಲಾ ಮಕ್ಕಳು ಆತಂಕಕ್ಕೊಳಗಾಗಿದ್ದಾರೆ.

ಗ್ರಾಮಸ್ಥರು ಒಂಟಿಯಾಗಿ ಸಂಚರಿಸದಂತೆ ಹಾಗೂ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಪರಸ್ಪರ ಸಂದೇಶ ರವಾನಿಸುತ್ತಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಅಗತ್ಯ ಕಾರ್ಯಾಚರಣೆ ಕೈಗೊಂಡಿದ್ದಾರೆ.

Related Articles

Latest Articles