ನಮ್ಮ ಕಡಬಕ್ಕೆ ಹೆಮ್ಮೆ:ಗೂಗಲ್ ಸ್ಟೂಡೆಂಟ್ ಅಂಬಾಸಿಡರ್ ಆಗಿ ಕಡಬದ ತನ್ವಿತ್ ಮಂಜುನಾಥ್ ಕೆ ಆಯ್ಕೆ

kadaba times

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ (AI & ML) ವಿಭಾಗದ 3ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಕಡಬದ ತನ್ವಿತ್ ಮಂಜುನಾಥ್ ಕೆ. ಪ್ರತಿಷ್ಠಿತ ‘ಗೂಗಲ್ ಸ್ಟೂಡೆಂಟ್ ಅಂಬಾಸಿಡರ್ 2026’ (#TeamGemini) ಆಗಿ ಆಯ್ಕೆಯಾಗಿದ್ದಾರೆ. ಕಾಲೇಜು ಕ್ಯಾಂಪಸ್‌ನಲ್ಲಿ ತಾಂತ್ರಿಕ ಜಾಗೃತಿ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಜವಾಬ್ದಾರಿ ಇವರಿಗೆ ಸಿಕ್ಕಿದೆ.

kadaba times
uniq

ಕಡಬ:  ಯುವ ಇಂಜಿನಿಯರಿಂಗ್ ವಿದ್ಯಾರ್ಥಿ ತನ್ವಿತ್ ಮಂಜುನಾಥ್ ಕೆ. ಪ್ರತಿಷ್ಠಿತ ‘ಗೂಗಲ್ ಸ್ಟೂಡೆಂಟ್ ಅಂಬಾಸಿಡರ್ 2026’ (#TeamGemini) ಆಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕಡುಬೀಸನಹಳ್ಳಿಯ ‘ಔಟರ್ ರಿಂಗ್ ರೋಡ್’ ವ್ಯಾಪ್ತಿಯಲ್ಲಿರುವ ಪ್ರಮುಖ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ (AI & ML) ವಿಭಾಗದ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ತನ್ವಿತ್, ಗೂಗಲ್‌ನ ಉದಯೋನ್ಮುಖ AI ಮಾದರಿಯಾದ ‘Gemini’ ಯನ್ನು ತಮ್ಮ ಕಾಲೇಜು ಕ್ಯಾಂಪಸ್‌ನಲ್ಲಿ ಪ್ರತಿನಿಧಿಸಲಿದ್ದಾರೆ.

Thanvith Manjunath K selected as Google Student Ambassador 2026 Team Gemini Bengaluru
ಗೂಗಲ್ ಸ್ಟೂಡೆಂಟ್ ಅಂಬಾಸಿಡರ್ 2026′ ಆಗಿ ಆಯ್ಕೆಯಾಗಿರುವ ತನ್ವಿತ್ ಮಂಜುನಾಥ್ ಕೆ

ತನ್ವಿತ್ ಮಂಜುನಾಥ್ ಅವರು ಕೇವಲ ಶೈಕ್ಷಣಿಕ ಅಧ್ಯಯನಕ್ಕಷ್ಟೇ ಸೀಮಿತವಾಗದೆ, ಕೃತಕ ಬುದ್ಧಿಮತ್ತೆ (AI), ಜನರೇಷನ್ ಎಐ (Generative AI), ಸಾಫ್ಟ್‌ವೇರ್ ಡೆವಲಪ್‌ಮೆಂಟ್, ವಿದ್ಯಾರ್ಥಿ ನಾಯಕತ್ವ ಹಾಗೂ ಸಮುದಾಯ ಸೇವೆಗಳಲ್ಲಿ (Community Service) ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.  ಚಿತ್ರಕಲೆ (Painting), ಲಿಯೋ ಕ್ಲಬ್ (Leo Club) ಮೂಲಕ ಸಮಾಜಸೇವೆ ಹಾಗೂ ವಿವಿಧ ಶೈಕ್ಷಣಿಕ/ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಇವರು ಕಡಬದ ವರ್ತಕರಾದ   ಮಂಜುನಾಥ್ ಕೆ. (ತನು ಎಲೆಕ್ಟ್ರಾನಿಕ್ಸ್ ಮಾಲೀಕರು) ಹಾಗೂ ಶಿಕ್ಷಕಿಯಾಗಿರುವ ಪದ್ಮಾವತಿ ಎ.ಟಿ. ದಂಪತಿಯ ಪುತ್ರ . ಕಠಿಣ ಪರಿಶ್ರಮದಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಈ ಸಾಧನೆ ಮಾಡಿ ಕುಟುಂಬಕ್ಕೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಗೂಗಲ್ ಅಂಬಾಸಿಡರ್ ಆಗಿ ತನ್ವಿತ್ ಪಾತ್ರವೇನು?

ತಮ್ಮ ಹೊಸ ಜವಾಬ್ದಾರಿಯ ಕುರಿತು ಹರ್ಷ ವ್ಯಕ್ತಪಡಿಸಿರುವ ತನ್ವಿತ್, “ನನ್ನ ಕ್ಯಾಂಪಸ್‌ನಲ್ಲಿ ಗೂಗಲ್‌ನ ಜಿಮಿನಿ (Gemini) ಸಂಸ್ಥೆಯನ್ನು ಪ್ರತಿನಿಧಿಸಲು ಮತ್ತು ಕೃತಕ ಬುದ್ಧಿಮತ್ತೆಯ (AI) ಅಗಾಧ ಶಕ್ತಿಯನ್ನು ಕಲಿಯಲು ಹಾಗೂ ಬಳಸಲು ನನ್ನ ಸಹಪಾಠಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಉತ್ಸುಕನಾಗಿದ್ದೇನೆ” ಎಂದು ತಿಳಿಸಿದ್ದಾರೆ.

kadaba times
kadaba times
  1. AI ಪರಿಕರಗಳ ಪರಿಚಯ: ನೂತನ ಎಐ ಟೂಲ್‌ಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು.

  2. ಕ್ಯಾಂಪ್ ಜಾಲ ವಿಸ್ತರಣೆ: ತಾಂತ್ರಿಕ ಉತ್ಸುಕರನ್ನು ಒಂದೆಡೆ ತರುವುದು.

  3. ಹೊಸ ಕೌಶಲ ಕಲಿಕೆ: ಉದಯೋನ್ಮುಖ ತಂತ್ರಜ್ಞಾನಗಳ ತರಬೇತಿ ನೀಡುವುದು.

  4. ವಿದ್ಯಾರ್ಥಿಗಳಿಗೆ ಪ್ರೇರಣೆ: ಯುವ ನಾವೀನ್ಯತೆಯನ್ನು (Innovation) ಪ್ರೋತ್ಸಾಹಿಸುವುದು.

ಗೂಗಲ್ ಸ್ಟೂಡೆಂಟ್ ಅಂಬಾಸಿಡರ್ ಆಗಿದೇಶದ ಉನ್ನತ ತಾಂತ್ರಿಕ ನಾಯಕರ ಸಾಲಿಗೆ ಸೇರ್ಪಡೆಗೊಂಡಿರುವ ತನ್ವಿತ್ ಮಂಜುನಾಥ್ ಅವರಿಗೆ ಪೋಷಕರು, ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಸಹಪಾಠಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Related Articles

Latest Articles