ಸ್ನೇಹಿತರೊಂದಿಗೆ ಕ್ರಿಕೆಟ್ ಆಡಿ ಮುಗಿಸಿದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಮೃತ್ಯು

kadaba times

ಬಹರೈನ್‌ನಿಂದ ವಾರದ ಹಿಂದಷ್ಟೇ ಹುಟ್ಟೂರಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಕ್ರಿಕೆಟ್ ಆಡಿ ಮುಗಿಸಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದಂತೆಯೇ ತೀವ್ರ ಎದೆನೋವಿನಿಂದ ಕೊನೆಯುಸಿರೆಳೆದ ಆಘಾತಕಾರಿ ಘಟನೆ ಜುಲೈ 26 ರಂದು ನಡೆದಿದೆ.

kadaba times
uniq

ಕೇಪು ಗ್ರಾಮದ ಬೆಂಗ್ರೋಡಿ ನಿವಾಸಿ ದಿವಾಕರ ಶೆಟ್ಟಿ (52) ಮೃತಪಟ್ಟ ದುರ್ದೈವಿ. ಬಹರೈನ್‌ನ ಪ್ರಸಿದ್ಧ ರೆಸ್ಟೋರೆಂಟ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ಇವರು, ಕ್ರೀಡಾಸಕ್ತರಾಗಿದ್ದು ಉತ್ತಮ ಕ್ರಿಕೆಟ್‌ ಆಟಗಾರರೂ ಆಗಿದ್ದರು.

ಸಂಭ್ರಮದಿಂದ ಆಡಿದ ಆಟ; 

ಜುಲೈ 26 ರಂದು ವಿಟ್ಲ ಸಮೀಪದ ಚಂದಳಿಕೆಯಲ್ಲಿರುವ ಇಂಡೋರ್ ಗ್ರೌಂಡ್‌ನಲ್ಲಿ ದಿವಾಕರ ಶೆಟ್ಟಿ ಅವರು ತಮ್ಮ ಆತ್ಮೀಯ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಅತ್ಯಂತ ಉತ್ಸಾಹದಿಂದ ಕ್ರಿಕೆಟ್ ಪಂದ್ಯವನ್ನಾಡಿದ್ದರು. ಪಂದ್ಯ ಮುಗಿದ ಬಳಿಕ ಎಲ್ಲರೊಂದಿಗೆ ಮಾತುಕತೆ ನಡೆಸಿ, ಮನೆಗೆ ಮರಳಲು ಸಿದ್ಧರಾಗುತ್ತಿದ್ದ ವೇಳೆಯಲ್ಲೇ ಅವರಿಗೆ ದಿಢೀರನೆ  ಎದೆನೋವು ಕಾಣಿಸಿಕೊಂಡಿದೆ.

kadaba times
kadaba times

ತಕ್ಷಣವೇ ಜಾಗರೂಕರಾದ ಸ್ನೇಹಿತರು ಹಾಗೂ ಕುಟುಂಬಸ್ಥರು ಅವರನ್ನು ವಿಟ್ಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ತಂದೆ-ತಾಯಿಯನ್ನು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಊರಿಗೆ ಬಂದ ವಾರದೊಳಗೇ ಕ್ರೀಡಾಪಟುವಾಗಿದ್ದ ವ್ಯಕ್ತಿ ಕ್ರಿಕೆಟ್ ಮೈದಾನದಲ್ಲೇ ಕುಸಿದುಬಿದ್ದು ಮೃತಪಟ್ಟಿರುವುದು ಕೇಪು ಹಾಗೂ ವಿಟ್ಲ ಪರಿಸರದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

Related Articles

Latest Articles