ಕಡಬದ ಕೊಂಬಾರು ಗ್ರಾಮದ ರಸ್ತೆಯಲ್ಲಿ ಭಾರಿ ಮಳೆಗೆ ನೆಲ ಕುಸಿತ: ಅಧಿಕಾರಿಗಳಿಂದ ಪರಿಶೀಲನೆ

kadaba times

ಕಡಬ ತಾಲೂಕಿನ ಕೊಂಬಾರು ಗ್ರಾಮದ ಮಣಿಭಾಂಡ–ಕಟ್ಟೆ ರಸ್ತೆಯಲ್ಲಿ ಭಾರಿ ಮಳೆಯ ಪರಿಣಾಮ ರಸ್ತೆಯ ಮಧ್ಯಭಾಗದಲ್ಲೇ ಬೃಹತ್ ನೆಲ ಕುಸಿತ ಸಂಭವಿಸಿದೆ. ಬಾವಿಯಂತೆ ಆಳವಾದ ಗುಂಡಿ ನಿರ್ಮಾಣವಾಗಿರುವುದರಿಂದ ವಾಹನ ಸವಾರರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದು, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

kadaba times
uniq

ಕಡಬ ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೊಂಬಾರು ಗ್ರಾಮದ ಮಣಿಭಾಂಡ–ಕಟ್ಟೆ ರಸ್ತೆಯಲ್ಲಿ ಇಂದು ಜುಲೈ 27 ರಂದು  ಬೃಹತ್ ನೆಲ ಕುಸಿತ ಸಂಭವಿಸಿದ್ದು, ಸಾರ್ವಜನಿಕರ ಸಂಚಾರಕ್ಕೆ  ಸಂಚಕಾರ ತಂದೊಡ್ಡಿದೆ.

ಮಳೆಯ ರಭಸಕ್ಕೆ ರಸ್ತೆಯ ಮಧ್ಯಭಾಗದ ಮಣ್ಣು ಕೊಚ್ಚಿಹೋಗಿ ಬಾವಿಯಂತಹ ಆಳವಾದ ಗುಂಡಿ ನಿರ್ಮಾಣಗೊಂಡಿದೆ. ಇದು ಪ್ರತಿನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.

Kadaba Kombaru Manibhanda Katte road cave in deep hole revenue officials inspection
ಕೊಂಬಾರು ಗ್ರಾಮದ ಮಣಿಭಾಂಡ-ಕಟ್ಟೆ ರಸ್ತೆಯಲ್ಲಿ ಕುಸಿದಿರುವ ಆಳವಾದ ಗುಂಡಿ

ರಸ್ತೆ ಕುಸಿದಿರುವ ವಿಷಯ ತಿಳಿಯುತ್ತಿದ್ದಂತೆಯೇ ಕಂದಾಯ ಇಲಾಖೆ ಹಾಗೂ ಕೊಂಬಾರು ಗ್ರಾಮ ಪಂಚಾಯತ್ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಭಾವ್ಯ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮಾಹಿತಿ ಸಂಗ್ರಹಿಸಿದ್ದಾರೆ.

kadaba times
kadaba times
Kadaba Kombaru Manibhanda Katte road cave in deep hole revenue officials inspection
ಕೊಂಬಾರು ಗ್ರಾಮದ ಮಣಿಭಾಂಡ-ಕಟ್ಟೆ ರಸ್ತೆಯಲ್ಲಿ ಕುಸಿದಿರುವ ಆಳವಾದ ಗುಂಡಿಯನ್ನು ಪರಿಶೀಲಿಸುತ್ತಿರುವ ಕಂದಾಯ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ.

ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆ

ಈ ಮಣಿಭಾಂಡ-ಕಟ್ಟೆ ರಸ್ತೆಯು ಈಗಾಗಲೇ ಸೂಕ್ತ ನಿರ್ವಹಣೆಯಿಲ್ಲದೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಇದೀಗ ಸುರಿದ ಮಳೆಯಿಂದಾಗಿ ರಸ್ತೆ ಮತ್ತಷ್ಟು ಹಾನಿಗೊಳಗಾಗಿದ್ದು, ವಾಹನ ಸಂಚಾರ ಸಂಪೂರ್ಣ ಕಷ್ಟಕರವಾಗಿದೆ. ಆದಾಗ್ಯೂ ಪ್ರತಿನಿತ್ಯ ಇದೇ ರಸ್ತೆಯನ್ನು ನೆಚ್ಚಿಕೊಂಡಿರುವ ಸ್ಥಳೀಯ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ರೈತರು ಜೀವ ಕೈಯಲ್ಲಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ರಸ್ತೆ ಮಧ್ಯದ ಆಳವಾದ ಗುಂಡಿ ಕಣ್ಣಿಗೆ ಕಾಣದೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿ ತಕ್ಷಣವೇ ಎಚ್ಚರಿಕಾ ಸೂಚನಾ ಫಲಕ (Warning Board)  ಅಳವಡಿಸಬೇಕು ಮತ್ತು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು  ಆಗ್ರಹಿಸಿದ್ದಾರೆ.

Related Articles

Latest Articles