
ಕಡಬ ತಾಲೂಕಿನ ನೆಲ್ಯಾಡಿ ಉದನೆ ನಿವಾಸಿಗಳಾದ ಕೇಶವ ಮತ್ತು ತೃಪ್ತಿ ದಂಪತಿಯ 1 ವರ್ಷ 4 ತಿಂಗಳ ಮುದ್ದು ಮಗು ಪೂರ್ವಾಂಶ್ ಅತ್ಯಂತ ಅಪರೂಪದ ಶಾರೀರಿಕ ಹಾಗೂ ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದೆ. ಮಗುವಿನ ತುರ್ತು ಚಿಕಿತ್ಸೆಗೆ ಭಾರಿ ವೆಚ್ಚ ತಗುಲುತ್ತಿದ್ದು, ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಪುತ್ತೂರು ಸಂಸ್ಥೆಯ ಮೂಲಕ ಸಾರ್ವಜನಿಕ ಉದಾರ ದಾನಿಗಳಲ್ಲಿ ಧನಸಹಾಯಕ್ಕಾಗಿ ವಿನಂತಿಸಲಾಗಿದೆ.


ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಉದನೆ ನಿವಾಸಿಗಳಾದ ಕೇಶವ ಹಾಗೂ ತೃಪ್ತಿ ದಂಪತಿಯ 1 ವರ್ಷ 4 ತಿಂಗಳ ಪುಟ್ಟ ಮಗು ‘ಪೂರ್ವಾಂಶ್’ ಅಪರೂಪದ ವೈದ್ಯಕೀಯ ಸವಾಲೊಂದನ್ನು ಎದುರಿಸುತ್ತಿದ್ದು, ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಉದಾರ ದಾನಿಗಳಿಂದ ಧನಸಹಾಯಕ್ಕಾಗಿ ಮನವಿ ಮಾಡಲಾಗಿದೆ.
ಮಗು ಪೂರ್ವಾಂಶ್ ಹುಟ್ಟಿನಿಂದಲೇ Infantile Epileptic Spasms Syndrome, Cortical Visual Impairment (CVI) ಹಾಗೂ ಅತ್ಯಂತ ಅಪರೂಪದ ಕಾಯಿಲೆಯಾದ Bosch-Boonstra-Schaaf Optic Atrophy Syndrome ಎಂಬ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದೆ.
ಈ ಗಂಭೀರ ಕಾಯಿಲೆಗಳಿಂದಾಗಿ ಮಗುವಿನ ದೈಹಿಕ ಬೆಳವಣಿಗೆ, ಕಣ್ಣಿನ ದೃಷ್ಟಿ ಹಾಗೂ ನರಮಂಡಲದ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ತೀವ್ರ ತೊಡಕುಗಳು ಉಂಟಾಗಿವೆ. ವೈದ್ಯರ ಸಲಹೆಯಂತೆ ಮಗುವಿಗೆ ನಿರಂತರವಾಗಿ ವಿವಿಧ ರೀತಿಯ ಥೆರಪಿಗಳು (Therapies) ಹಾಗೂ ದುಬಾರಿ ಔಷಧಗಳನ್ನು ನೀಡಬೇಕಾಗಿದೆ.ಮಗುವಿನ ಕುಟುಂಬವು ಬಡತನದಲ್ಲಿದ್ದು, ದಿನಂಪ್ರತಿ ಚಿಕಿತ್ಸೆಗೆ ತಗುಲುವ ಭಾರಿ ವೆಚ್ಚವನ್ನು ಭರಿಸಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾಯೋಜನೆ:
ಬಡ ಕುಟುಂಬದ ಈ ಕಷ್ಟವನ್ನು ಅರಿತ ಪುತ್ತೂರಿನ ‘ಶ್ರೀ ಕೃಷ್ಣ ಯುವಕ ಮಂಡಲ (ರಿ.) ಸಿಟಿಗುಡ್ಡೆ’ ಸಂಸ್ಥೆಯು ತನ್ನ ‘ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆ’ಯ 75ನೇ ಯೋಜನೆಯ ಜುಲೈ ತಿಂಗಳ ಸಹಾಯವನ್ನು ಈ ಮಗುವಿನ ಚಿಕಿತ್ಸೆಗೆ ನೀಡಲು ಮುಂದಾಗಿದೆ.“ಬಡವರ ಸೇವೆಯೇ ದೇವರ ಸೇವೆ” ಎಂಬ ತತ್ತ್ವದೊಂದಿಗೆ ಮಗುವಿನ ಚಿಕಿತ್ಸೆಯ ವೆಚ್ಚ ಹೆಚ್ಚಾಗಿರುವುದರಿಂದ ಸಹೃದಯಿ ಬಂಧುಗಳು ಹಾಗೂ ದಾನಿಗಳು ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡಿ ಕಂದಮ್ಮನ ಪ್ರಾಣ ಉಳಿಸಲು ಸಹಕರಿಸಬೇಕಾಗಿ ಯುವಕ ಮಂಡಲ ಹಾಗೂ ಪೋಷಕರು ವಿನಂತಿಸಿದ್ದಾರೆ.


💳 ಸಹಾಯ ಹಸ್ತ ಚಾಚಲು ಬ್ಯಾಂಕ್ ವಿವರಗಳು (Bank Details):
-
ಬ್ಯಾಂಕ್ ಹೆಸರು: Union Bank of India
-
ಖಾತೆ ಸಂಖ್ಯೆ (A/c No.):
520101016787869 -
IFSC ಕೋಡ್:
UBIN0900826 -
ಪೋಸ್ಟರ್ನಲ್ಲಿ ನೀಡಲಾಗಿರುವ QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ನೇರವಾಗಿ ಯುಪಿಐ (Google Pay/PhonePe) ಮೂಲಕ ಆರ್ಥಿಕ ನೆರವು ರವಾನಿಸಬಹುದು

