ಕಡಬದಲ್ಲಿ ಬಿಲ್ಲವ ಸಂಘದಿಂದ ‘ಆಟಿ ಕೂಟ: ಸಮಾಜದ ನಾಲ್ವರು ಸಾಧಕಿಯರಿಗೆ ಸನ್ಮಾನ

kadaba times

ಕಡಬ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಬಿಲ್ಲವ ಮಹಿಳಾ ವೇದಿಕೆ ಹಾಗೂ ಯುವವಾಹಿನಿ ಕಡಬ ಘಟಕದ ಸಹಯೋಗದೊಂದಿಗೆ ‘ಆಟಿ ಕೂಟ’ ಕಾರ್ಯಕ್ರಮ ಜುಲೈ 26 ರಂದು ನಡೆಯಿತು. ಕಡಬದ ಅನುಗ್ರಹ ಸಭಾಭವನದಲ್ಲಿ ನಡೆದ ಸಂಭ್ರಮದ ಸಮಾರಂಭದಲ್ಲಿ ಸಮಾಜದ ನಾಲ್ವರು ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

kadaba times
uniq

ಕಡಬ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಕಡಬ ತಾಲೂಕು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಮಹಿಳಾ ವೇದಿಕೆ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಕಡಬ ಘಟಕದ ಸಹಕಾರದೊಂದಿಗೆ ಸಂಪ್ರದಾಯಬದ್ಧ ‘ಆಟಿ ಕೂಟ’ ಕಾರ್ಯಕ್ರಮವು ಜುಲೈ 26 ರಂದು ಕಡಬದ ಅನುಗ್ರಹ ಸಭಾಭವನದಲ್ಲಿ  ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ನಾಲ್ವರು ಹಿರಿಯ ಸಾಧಕಿಯರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಾಂಪ್ರದಾಯಿಕ ಆಟಿ ಕೂಟದ ಸಂಭ್ರಮದಲ್ಲಿ ಬಾಲಕ್ಕ ಕೊರಪ್ಪಣೆ – (ನಾಟಿ ವೈದ್ಯಕೀಯ ಕ್ಷೇತ್ರದ ಸೇವೆಗಾಗಿ), ಲೀಲಾವತಿ ಕೊಡಿಂಬಾಳ (ಬಳ್ಪ ಆರೋಗ್ಯ ಇಲಾಖೆಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ),ಇಂದಿರಾ ಬಸ್ತಿಕೊಡಿಂಕಿರಿ ( ಧಾರ್ಮಿಕ ಕ್ಷೇತ್ರದ ಸೇವೆಗಾಗಿ),ಚಂದ್ರಾವತಿ ಶಾಂತಿಮೂಲೆ( ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಾಗಿ)  ಸನ್ಮಾನಿಸಿ ಗೌರವಿಸಲಾಯಿತು.

kadaba times
kadaba times

ಸಭಾ ಕಾರ್ಯಕ್ರಮಕ್ಕೂ ಮುನ್ನ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ಆಟೋಟ ಸ್ಪರ್ಧೆಗಳನ್ನು ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಪಿ.ವೈ. ಕುಸುಮಾ ಅವರು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಕಡಬ ತಾಲೂಕು ಅಧ್ಯಕ್ಷ ಸತೀಶ್ ಕೆ. ಐತ್ತೂರು ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಂತಿ ನಂದೋಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶಿಕ್ಷಕಿ ಸರಿತಾ ಜನಾರ್ಧನ ಬಿ.ಎಲ್. ಅವರು ಕರಾವಳಿಯ ಆಟಿ ತಿಂಗಳ ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಬಿಲ್ಲವ ಸಂಘ, ಮಹಿಳಾ ವೇದಿಕೆ ಹಾಗೂ ಯುವವಾಹಿನಿ ಘಟಕದ ಪದಾಧಿಕಾರಿಗಳು ಮತ್ತು ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Articles

Latest Articles