ದೇವಸ್ಥಾನಕ್ಕೆಂದು ಬೈಕ್ ಪಡೆದು ₹20 ಸಾವಿರ ಬೇಡಿಕೆಯಿಟ್ಟ ವಂಚಕ

ಎರಡು ನಿಮಿಷ ಎಂದವ ಸಕಲೇಶಪುರದಿಂದ ಧಮ್ಕಿ : ಉಪ್ಪಿನಂಗಡಿಯಲ್ಲಿ ವಿಲಕ್ಷಣ ಘಟನೆ

kadaba times

ಉಪ್ಪಿನಂಗಡಿ: ಒಂದೆರಡು ದಿನದ ಪರಿಚಯ ನಟಿಸಿ, ದೇವಸ್ಥಾನಕ್ಕೆ ಹೋಗಿ ಬರುವುದಾಗಿ ನಂಬಿಸಿ ಬೈಕ್ ಇಸ್ಕೊಂಡು ಹೋದ ವ್ಯಕ್ತಿಯೊಬ್ಬ, ಬೈಕ್ ವಾಪಸ್ ಬೇಕಾದರೆ 20 ಸಾವಿರ ರೂಪಾಯಿ ಕೊಡುವಂತೆ ಮಾಲೀಕನಿಗೆ ಧಮ್ಕಿ ಹಾಕಿದ ವಿಲಕ್ಷಣ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

kadaba times
uniq

ಇಲ್ಲಿನ ರಾಜಧಾನಿ ಟವರ್ಸ್‌ನಲ್ಲಿ ‘ಶ್ರೀ ದೇವಿ ಸ್ಟಿಕ್ಕರ್ ಕಟಿಂಗ್ಸ್ ಸೆಂಟರ್’ ನಡೆಸುತ್ತಿರುವ ಶೀನಪ್ಪ ಎಂಬವರೇ ಮೋಸ ಹೋದವರು. ಅದೇ ಕಟ್ಟಡದ ಲಾಡ್ಜ್‌ನಲ್ಲಿ ತಂಗಿದ್ದ ಸಕಲೇಶಪುರ ಮೂಲದ ಶ್ಯಾಮ್ ಜಿ ಕೃಷ್ಣನ್ (31) ಎಂಬಾತ ಶೀನಪ್ಪ ಅವರ ಬಳಿ ಬಂದು ಆತ್ಮೀಯತೆ ಬೆಳೆಸಿಕೊಂಡಿದ್ದ.

ಮಂಗಳವಾರ ಬೆಳಗ್ಗೆ ಬಂದ ಆತ, “ದೇವಸ್ಥಾನದಲ್ಲಿರುವ ನನ್ನ ಮನೆಯವರಿಗೆ ಬಟ್ಟೆ ಕೊಟ್ಟು ಎರಡು ನಿಮಿಷದಲ್ಲಿ ಬರುತ್ತೇನೆ, ಒಮ್ಮೆ ಬೈಕ್ ಕೊಡಿ” ಎಂದು ಕೇಳಿದ್ದಾನೆ. ಆತನ ಮಾತನ್ನು ನಂಬಿದ ಶೀನಪ್ಪ ಅವರು ಹೆಲ್ಮೆಟ್ ಕೊಟ್ಟು ಬೈಕ್ ಕಳುಹಿಸಿದ್ದಾರೆ.

kadaba times
kadaba times

ಬೈಕ್ ಬೇಕಿದ್ರೆ ಹಣ ಕೊಡು: ಬೈಕ್ ತಗೊಂಡು ಹೋದವನು ಎಷ್ಟು ಹೊತ್ತಾದರೂ ಬಾರದಿದ್ದಾಗ ಶೀನಪ್ಪ ಫೋನ್ ಮಾಡಿದ್ದಾರೆ. ಮೊದಲು “ದೇವಸ್ಥಾನದ ಹತ್ತಿರವೇ ಇದ್ದೇನೆ” ಎಂದವನು, ಆಮೇಲೆ ಅಸಲಿ ರೂಪ ತೋರಿಸಿದ್ದಾನೆ. “ನಾನು ಸಕಲೇಶಪುರಕ್ಕೆ ಬಂದಿದ್ದೇನೆ, ನಿನ್ನ ಬೈಕ್ ಬೇಕಾದರೆ 20 ಸಾವಿರ ರೂಪಾಯಿ ತಗೊಂಡು ಇಲ್ಲಿಗೆ ಬಾ” ಎಂದು ದಬಾಯಿಸಿದ್ದಾನೆ.

ಪೊಲೀಸ್ ದೂರು ದಾಖಲು: ತಾವು ಮೋಸ ಹೋಗಿರುವುದನ್ನು ಅರಿತ ಶೀನಪ್ಪ ತಕ್ಷಣ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ರೈತ ಸಂಘದ ನಾಯಕ ರೂಪೇಶ್ ರೈ ಅಲಿಮಾರ ಅವರು ಮಧ್ಯೆ ಪ್ರವೇಶಿಸಿದ ಬಳಿಕ ವಂಚಕ ಶ್ಯಾಮ್ ಜಿ ಕೃಷ್ಣನ್ ವಿರುದ್ಧ ಪ್ರಕರಣ ದಾಖಲಾಗಿದೆ.

Related Articles

Latest Articles