ಬಿಳಿನೆಲೆ ಸಹಕಾರಿ ಸಂಘದಲ್ಲಿ ನಿಜಕ್ಕೂ ಏನಾಗಿದೆ?

ಆರೋಪ, ಅಪಪ್ರಚಾರ, ದೈವದ ಅರಿಕೆ

kadaba times

ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಸಂಘದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಹೇಳಿದರು.

kadaba times
uniq

ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಆಡಳಿತ ಮಂಡಳಿಯ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದ್ದು, ಸತ್ಯ ಹೊರಬರಲೆಂದು ಕೋಡಿಂಬಾಳದ ಕಾರಣಿಕ ಕ್ಷೇತ್ರ ಮಜ್ಜಾರು ಶ್ರೀ ರಾಜನ್ ದೈವದ ಸನ್ನಿಧಿಯಲ್ಲಿ ಅರಿಕೆ ಸಲ್ಲಿಸಲಾಗಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕಾತಿ ಪ್ರಕರಣವು ನ್ಯಾಯಾಲಯದ ಆದೇಶದಂತೆ ನಡೆದಿದ್ದು, ರಂಜಿತ್ ಅವರನ್ನು ನೇಮಕ ಮಾಡಲಾಗಿದೆ. ಆದರೆ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ ಎಂದು ಹೇಳಿದರು.

kadaba times
kadaba times

ನಿರ್ದೇಶಕ ರಮೇಶ್ ವಾಲ್ತಾಜೆ ಅವರು ಪಡೆದ ₹20 ಲಕ್ಷ ಸಾಲದ ಬಗ್ಗೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಲ ಮರುಪಾವತಿ ಮಾಡಲಿದ್ದಾರೆ ಎಂಬ ಸುದ್ದಿಗಳು ಸುಳ್ಳಾಗಿವೆ. ಬಿಳಿನೆಲೆ ಸಿ.ಎ. ಬ್ಯಾಂಕ್‌ನಲ್ಲಿ ಯಾವುದೇ ಭ್ರಷ್ಟಾಚಾರ ಅಥವಾ ಅವ್ಯವಹಾರ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ವೆಂಕಟ್ರಮಣ ಗೌಡ ಕೋಲ್ಪೆ ಹಾಗೂ ನಿರ್ದೇಶಕರಾದ ಗಿರಿಯಪ್ಪ ಗೌಡ ಮುಗೇರು, ಸತೀಶ್ ಎರ್ಕ, ರಮೇಶ್ ವಾಲ್ತಾಜೆ, ಸುರೇಶ್ ಬಿಳಿನೆಲೆ ಮತ್ತು ತನಿಯಪ್ಪ ಬೊಟ್ಟಡ್ಕ ಉಪಸ್ಥಿತರಿದ್ದರು.

Related Articles

Latest Articles