ಸುಬ್ರಹ್ಮಣ್ಯಕ್ಕೆ ಕೆಲಸಕ್ಕೆ ತೆರಳಿದ್ದ ಬಿಳಿನೆಲೆ ಗ್ರಾಮದ ಯುವತಿ ನಾಪತ್ತೆ

kadaba times

ಸುಬ್ರಹ್ಮಣ್ಯದ ಸಂಸ್ಥೆಯೊಂದಕ್ಕೆ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದಿಂದ ವರದಿಯಾಗಿದೆ.

kadaba times
uniq

  ಕಳೆದ ಒಂದು ವರ್ಷದಿಂದ ಸುಬ್ರಹ್ಮಣ್ಯದ ಪ್ಯಾನ್ಸಿಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿಕೊಂಡಿದ್ದರು. 

ಜೂನ್ 1ರ ಸೋಮವಾರದಂದು ಬೆಳಿಗ್ಗೆ 11:00 ಗಂಟೆಗೆ  ಎಂದಿನಂತೆ ಸುಬ್ರಹ್ಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆ  ಎಂದು ಮನೆಯಿಂದ ಹೊರಟಿದ್ದರು.  ಆದರೆ ಸಂಜೆಯಾದರೂ ಅವರು ಮನೆಗೆ ಮರಳಿ ಬಂದಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಮೊಬೈಲ್ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ.  ನಂತರ ಸಂಬಂಧಿಕರ ಮನೆ ಸೇರಿದಂತೆ ಅಕ್ಕಪಕ್ಕದ ಹಾಗೂ ಎಲ್ಲಾ ಸಂಭಾವ್ಯ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಯುವತಿಯ ಪತ್ತೆಯಾಗಿಲ್ಲ. 

kadaba times
kadaba times

ಈ ಕುರಿತು ಯುವತಿಯ ತಂದೆ  ಜೂನ್ 2ರಂದು ಕಡಬ ಪೊಲೀಸ್ ಠಾಣೆಗೆ ತೆರಳಿ ಮಗಳನ್ನು ಪತ್ತೆಹಚ್ಚಿ ನೀಡುವಂತೆ ಲಿಖಿತ ದೂರು ನೀಡಿದ್ದಾರೆ. ಸದ್ಯ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Latest Articles