ನೂಜಿಬಾಳ್ತಿಲದ ನಾಟಿ ವೈದ್ಯ, ಮುಟ್ಟಾಳೆ ತಯಾರಕ ಇನ್ನು ನೆನಪು ಮಾತ್ರ

kadaba times

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ನಿವಾಸಿ, ನಾಟಿ ವೈದ್ಯ ಹಾಗೂ ಕಟ್ಟಡ ಕಾರ್ಮಿಕ ಕಾಂತಪ್ಪ ಕಲ್ಲುಗುಡ್ಡೆ (63) ಅಸೌಖ್ಯದಿಂದ ನಿಧನರಾದರು. ಅವರ ಜೀವನ ಹಾಗೂ ಕುಟುಂಬದ ಮಾಹಿತಿ ಇಲ್ಲಿದೆ.

kadaba times
uniq

ಕಡಬ: ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಪ್ಪೆಜಕ್ಕೆಲ್ ನಿವಾಸಿ, ಬಹುಮುಖ ಪ್ರತಿಭೆಯ ಕಾಂತಪ್ಪ ಕಲ್ಲುಗುಡ್ಡೆ (63) ಅವರು ಮಾ.15ರಂದು ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನರಾದರು. ಇವರು ದಿವಂಗತ ಅಂಗಾರ ಮತ್ತು ದಿವಂಗತ ಲಿಂಗಮ್ಮ ದಂಪತಿಯ ಪುತ್ರರಾಗಿದ್ದಾರೆ.

ಬಹುಮುಖ ವ್ಯಕ್ತಿತ್ವ: ಕಾಂತಪ್ಪ ಅವರು ವೃತ್ತಿಯಲ್ಲಿ ಕಟ್ಟಡ ಕಾರ್ಮಿಕರಾಗಿದ್ದರೂ, ಗ್ರಾಮೀಣ ಸೊಗಡಿನ ಕಲೆಗಳನ್ನು ಉಳಿಸಿಕೊಂಡಿದ್ದರು. ಅಡಿಕೆ ಹಾಳೆಯಲ್ಲಿ ‘ಮುಟ್ಟಾಳೆ’ ಕಟ್ಟುವ ಕಾಯಕವನ್ನು ಇವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಮಾತ್ರವಲ್ಲದೆ, ಈ ಭಾಗದ ಪ್ರಸಿದ್ಧ ನಾಟಿ ವೈದ್ಯರಾಗಿಯೂ ಗುರುತಿಸಿಕೊಂಡಿದ್ದರು. ವಿಶೇಷವಾಗಿ ಮೂಲವ್ಯಾಧಿ ಹಾಗೂ ಹಲ್ಲು ನೋವಿಗೆ ಸಂಬಂಧಿಸಿದಂತೆ ಇವರು ನೀಡುತ್ತಿದ್ದ ಗಿಡಮೂಲಿಕೆ ಮದ್ದುಗಳು ಜನಪ್ರಿಯವಾಗಿದ್ದವು.

kadaba times
kadaba times

ಕುಟುಂಬ: ಮೃತರು ಪತ್ನಿ ಸೇಸಮ್ಮ, ಪುತ್ರಿಯರಾದ ಪೂರ್ಣಿಮಾ, ಪುಷ್ಪಾ, ಭವಿತಾ ಹಾಗೂ ಪುತ್ರರಾದ ಪ್ರಸಾದ್ ಮತ್ತು ನಿತಿನ್ ಅವರನ್ನು ಅಗಲಿದ್ದಾರೆ.

ಬಂಧು ಬಳಗದಲ್ಲಿ ದೈವ ನರ್ತಕರಾದ ಕಿಟ್ಟು, ಕಡಬದ ಉಪ ತಹಶೀಲ್ದಾರ್ ಗೋಪಾಲ ಕೆ., ಶಿಕ್ಷಕರಾದ ಆನಂದ ಮತ್ತು ರಾಮಕೃಷ್ಣ (ಸಹೋದರರು) ಹಾಗೂ ಸಹೋದರಿಯರಾದ ನೀಲು, ರಾಮಕ್ಕ, ಸುಂದರಿ ಸೇರಿದಂತೆ ಅಪಾರ ಮಿತ್ರರನ್ನು ಹಾಗೂ ಶಿಷ್ಯವರ್ಗವನ್ನು ಕಾಂತಪ್ಪ ಕಲ್ಲುಗುಡ್ಡೆ ಅವರು ಅಗಲಿದ್ದಾರೆ. ಇವರ ನಿಧನಕ್ಕೆ ಸ್ಥಳೀಯರು ಹಾಗೂ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Latest Articles