ಕಾಣಿಯೂರು: ತರವಾಡು ಮನೆ ವಿಚಾರವಾಗಿ ಹಲ್ಲೆ ಆರೋಪ; ಕಡಬ ಠಾಣೆಯಲ್ಲಿ ಐವರ ವಿರುದ್ಧ FIR ದಾಖಲು

kadaba times

ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದಲ್ಲಿ ತರವಾಡು ಮನೆಯ ಹಕ್ಕು ಮತ್ತು ಕೃಷಿ ವಿಚಾರಕ್ಕೆ ಸಂಬಂಧಿಸಿ ಜಗನ್ನಾಥ ಎಂಬವರ ಮೇಲೆ ಗುಂಪಿನಿಂದ ಹಲ್ಲೆ ನಡೆಸಲಾಗಿದ್ದು, ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ: ತರವಾಡು ಮನೆಯ ದೈವ-ದೇವರ ಚಾಕ್ರಿ ಹಾಗೂ ಕೃಷಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಗುಂಪಿನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಐವರು ಹಾಗೂ ಇತರರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೋಳ್ಪಾಡಿ ಗ್ರಾಮದ ನಿವಾಸಿ ಜಗನ್ನಾಥ ಡಿ. (56) ಹಲ್ಲೆಗೊಳಗಾದವರು. ಇವರು ಕಳೆದ 50 ವರ್ಷಗಳಿಂದ ತಂದೆಯ ಕಾಲದಿಂದಲೂ ತಮ್ಮ ತರವಾಡು ಮನೆಯಲ್ಲಿ ದೈವ-ದೇವರ ಚಾಕ್ರಿ ಹಾಗೂ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡಿದ್ದರು.

ಮಾರ್ಚ್ 14ರಂದು ಜಗನ್ನಾಥ ಅವರು ಬೆಳೆದ ತರಕಾರಿಯನ್ನು ಮಾರಾಟ ಮಾಡಲು ಕಾಣಿಯೂರು ಪೇಟೆಗೆ ಹೋಗಿದ್ದರು. ಮಧ್ಯಾಹ್ನ ಮನೆಗೆ ಮರಳಿ ಬಂದಾಗ, ಮನೆಯ ನೀರಿನ ಟ್ಯಾಂಕ್ ಮುಗುಚಿ ಪೈಪ್ ತುಂಡು ಮಾಡಲಾಗಿತ್ತು. ಅಲ್ಲದೆ ಮನೆಯ ಹಂಚು ತೆಗೆದು, ಬೋರ್ ಪಂಪ್ ಪೈಪ್ ಕತ್ತರಿಸಿ ಹಾನಿ ಮಾಡಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಕುಟುಂಬದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

kadaba times
kadaba times

ಅದೇ ದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಜಗನ್ನಾಥ ಅವರು ತಮ್ಮ ಸ್ಕೂಟಿಯಲ್ಲಿ ಅಲೆಕ್ಕಾಡಿಗೆ ತೆರಳುತ್ತಿದ್ದಾಗ, ಆರೋಪಿಗಳಾದ ಜಯಚಂದ್ರ, ಗೋಪಿನಾಥ, ಜನಾರ್ಧನ, ಶಿವರಾಮ ಹಾಗೂ ಜಯಪ್ರಕಾಶ್ ಎಂಬುವವರು ರಿಕ್ಷಾ ಮತ್ತು ಬೈಕ್‌ಗಳಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಈ ವೇಳೆ ಜಯಚಂದ್ರ ಎಂಬವರು “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದರೆ, ಜನಾರ್ಧನ ಎಂಬವರು ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ ಎನ್ನಲಾಗಿದೆ.

“ನಿನ್ನನ್ನು ತರವಾಡು ಮನೆಯಿಂದ ಹೊರಹಾಕುತ್ತೇವೆ” ಎಂದು ಆರೋಪಿಗಳು ಬೆದರಿಕೆ ಒಡ್ಡಿದ್ದು, ಹಲ್ಲೆಯಿಂದಾಗಿ ಜಗನ್ನಾಥ ಅವರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ನೋವು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಾರ್ಚ್ 15ರಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ: 31/2026. ಕಲಂ: 115(2),324(2)126(2),352,351(3),329(3)r/w 190 BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Latest Articles