ದಕ್ಷಿಣ ಕನ್ನಡದ ‘ಕಡಬ’ ಈಗ ರಾಜ್ಯಕ್ಕೇ ಮಾಡೆಲ್: ತೆರಿಗೆ ವಸೂಲಿಯಲ್ಲಿ ಹೊಸ ಇತಿಹಾಸ ಬರೆದ ತಾಲೂಕು

kadaba times

ದಕ್ಷಿಣ ಕನ್ನಡದ ಕಡಬ ತಾಲೂಕು ತೆರಿಗೆ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದೆ. 2025-26ನೇ ಸಾಲಿನಲ್ಲಿ ಶೇ. 103ರಷ್ಟು ತೆರಿಗೆ ವಸೂಲಿ ಮಾಡಿ ಇತಿಹಾಸ ಸೃಷ್ಟಿಸಿದ ಕಡಬದ ಸಂಪೂರ್ಣ ವರದಿ ಇಲ್ಲಿದೆ.

kadaba times
uniq

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ನೂತನ ತಾಲೂಕುಗಳಲ್ಲಿ ಒಂದಾದ ಕಡಬ, ಈಗ ತೆರಿಗೆ ಸಂಗ್ರಹಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ (2025-26) ನಿಗದಿತ ಗುರಿಗಿಂತಲೂ ಹೆಚ್ಚು ತೆರಿಗೆ ಸಂಗ್ರಹಿಸುವ ಮೂಲಕ ಕಡಬ ತಾಲೂಕು ಶೇಕಡಾ 103ರಷ್ಟು ಸಾಧನೆ ಮಾಡಿ ರಾಜ್ಯದಲ್ಲೇ ಅಗ್ರಸ್ಥಾನಕ್ಕೇರಿದೆ.

ಕಡಬ ತಾಲೂಕಿನ ವ್ಯಾಪ್ತಿಯಲ್ಲಿರುವ 21 ಗ್ರಾಮ ಪಂಚಾಯತ್‌ಗಳಿಗೆ ಈ ವರ್ಷ 3.34 ಕೋಟಿ ರೂ. ತೆರಿಗೆ ಸಂಗ್ರಹಣೆಯ ಗುರಿ ನೀಡಲಾಗಿತ್ತು. ಆದರೆ, ಹಣಕಾಸು ವರ್ಷ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಅಧಿಕಾರಿಗಳ ದಕ್ಷತೆ ಮತ್ತು ನಾಗರಿಕರ ಸಹಕಾರದಿಂದ 3.41 ಕೋಟಿ ರೂ. ವಸೂಲಿ ಮಾಡಲಾಗಿದೆ.

ವಿಶೇಷವೆಂದರೆ, ತಾಲೂಕಿನ ಎಲ್ಲಾ 21 ಗ್ರಾಮ ಪಂಚಾಯತ್‌ಗಳು ಶೇ. 100 ಕ್ಕೂ ಹೆಚ್ಚು ಪ್ರಗತಿ ಸಾಧಿಸಿವೆ. ಅವುಗಳಲ್ಲಿ ಪ್ರಮುಖ ಪಂಚಾಯತ್‌ಗಳ ವಿವರ ಹೀಗಿದೆ: ಕುಕ್ಕೆ ಸುಬ್ರಹ್ಮಣ್ಯ: 1 ಕೋಟಿ ರೂ.ಗೂ ಅಧಿಕ,ನೆಲ್ಯಾಡಿ: 33 ಲಕ್ಷ ರೂ,ಕೌಕ್ರಾಡಿ: 29 ಲಕ್ಷ ರೂ.,ರಾಮಕುಂಜ: 20 ಲಕ್ಷ ರೂ.,ಕುಟ್ರುಪಾಡಿ : 19 ಲಕ್ಷ ರೂ,ಬೆಳಂದೂರು : 17 ಲಕ್ಷ ರೂ,ಸವಣೂರು : 16.5 ಲಕ್ಷ ರೂ,ಆಲಂಕಾರು : 16.4 ಲಕ್ಷ ರೂ,ಬಿಳಿನೆಲೆ : 15 ಲಕ್ಷ ರೂ,ಮರ್ಧಾಳ : 15 ಲಕ್ಷ ರೂ.

kadaba times
kadaba times

ವಾಣಿಜ್ಯ ಸಂಕೀರ್ಣಗಳು, ಕೈಗಾರಿಕಾ ಕಟ್ಟಡಗಳು ಮತ್ತು ಮನೆಗಳಿಗೆ ವಿಧಿಸುವ ತೆರಿಗೆಯನ್ನು ಶಿಸ್ತುಬದ್ಧವಾಗಿ ವಸೂಲಿ ಮಾಡಿರುವುದು ಈ ಯಶಸ್ಸಿಗೆ ಕಾರಣ. ಸರ್ಕಾರದ ಆರಂಭಿಕ 3 ತಿಂಗಳ ಶೇ.5ರ ವಿನಾಯಿತಿಯನ್ನು ಜನತೆ ಸರಿಯಾಗಿ ಬಳಸಿಕೊಂಡಿದ್ದಾರೆ. ಹಳೆಯ ಬಾಕಿಗಳನ್ನು ಬದಿಗಿಟ್ಟು, ಈ ವರ್ಷದ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸುವ ಮೂಲಕ ಕಡಬದ ನಾಗರಿಕರು ಜವಾಬ್ದಾರಿಯುತ ನಡೆ ಪ್ರದರ್ಶಿಸಿದ್ದಾರೆ.

ಜಿಲ್ಲೆಯ ಸರಾಸರಿ ತೆರಿಗೆ ಸಂಗ್ರಹಣೆ ಶೇ. 92 ರಷ್ಟಿದ್ದು, ಕಡಬ ಮೊದಲ ಸ್ಥಾನದಲ್ಲಿದ್ದರೆ ಮಂಗಳೂರು ಕೊನೆಯ ಸ್ಥಾನದಲ್ಲಿದೆ.ಕಡಬ: 103%,ಮೂಡುಬಿದ್ರೆ: 99%,ಉಳ್ಳಾಲ: 96%,ಸುಳ್ಯ: 95%,ಮಂಗಳೂರು: 85%.

Related Articles

Latest Articles