ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ಸಾರ್ವಜನಿಕ ರಸ್ತೆ ಒತ್ತುವರಿ ಆರೋಪ: ತಹಶೀಲ್ದಾರ್,ಮುಖ್ಯಾಧಿಕಾರಿಗೆ ಕಾಲನಿ ನಿವಾಸಿಗಳ ದೂರು

ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಭಾರಿ ತೊಂದರೆ

kadaba times

ಕೋಡಿಂಬಾಳ ಗ್ರಾಮದ ಮಜ್ಜುಗುಡ್ಡೆ ಪರಿಶಿಷ್ಟ  ಕಾಲೋನಿಯ ದಶಕಗಳ ಹಳೆಯ ರಸ್ತೆ ಒತ್ತುವರಿ ಆರೋಪ. ಸಂಚಾರಕ್ಕೆ ಅಡ್ಡಿಪಡಿಸುತ್ತಿರುವವರ ವಿರುದ್ಧ ತಹಶೀಲ್ದಾರರಿಗೆ ಗ್ರಾಮಸ್ಥರ ದೂರು. ಪೂರ್ಣ ಮಾಹಿತಿ ಇಲ್ಲಿದೆ.

kadaba times
uniq

ಕಡಬ: ಇಲ್ಲಿನ ಪ.ಪಂ ವ್ಯಾಪ್ತಿಯ  ಕೋಡಿಂಬಾಳ ಗ್ರಾಮದ ಮಜ್ಜುಗುಡ್ಡೆ  ಪರಿಶಿಷ್ಟ  ಕಾಲೋನಿಗೆ ಸಂಪರ್ಕ ಕಲ್ಪಿಸುವ ದಶಕಗಳ ಹಳೆಯ ಸಾರ್ವಜನಿಕ ರಸ್ತೆಯನ್ನು ಸ್ಥಳೀಯ ವ್ಯಕ್ತಿಗಳಿಬ್ಬರು ಅಕ್ರಮವಾಗಿ ಒತ್ತುವರಿ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕಾಲೋನಿ ನಿವಾಸಿಗಳು ಕಡಬ ತಹಶೀಲ್ದಾರರಿಗೆ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮಜ್ಜುಗುಡ್ಡೆ ಪರಿಶಿಷ್ಟ  ಕಾಲೋನಿಗೆ ಹೋಗುವ ರಸ್ತೆಯು ಸುಮಾರು 40 ವರ್ಷಗಳಿಂದ ಬಳಕೆಯಲ್ಲಿತ್ತು. ಈ ಹಿಂದೆ ಆಲಿಸ್ ಚಾಕೋ ಅವರು ಪಂಚಾಯತ್ ಸದಸ್ಯರಾಗಿದ್ದ ಕಾಲದಲ್ಲಿ ಪಂಚಾಯತ್ ಅನುದಾನದಡಿ ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ಪ್ರಸ್ತುತ ಈ ರಸ್ತೆಯು ತೀರಾ ಹದಗೆಟ್ಟಿದ್ದು, ವಾಹನ ಸಂಚಾರ ಮಾತ್ರವಲ್ಲದೆ ಪಾದಚಾರಿಗಳಿಗೂ ನಡೆದಾಡಲು ಅಸಾಧ್ಯವಾದ ಸ್ಥಿತಿಯಲ್ಲಿದೆ.

ಒತ್ತುವರಿ ಮತ್ತು ಬೆದರಿಕೆ: ಇತ್ತೀಚೆಗೆ ನಿವಾಸಿಗಳು ಸ್ವಯಂಪ್ರೇರಿತರಾಗಿ ರಸ್ತೆಗೆ ಮಣ್ಣು ಹಾಕಿ ದುರಸ್ತಿ ಮಾಡಲು ಮುಂದಾದಾಗ, ಸ್ಥಳೀಯರು ಇದು ನಮ್ಮ ‘ಪಟ್ಟಾ ಜಾಗ’ ಎಂದು ಹೇಳಿ ಕಾಮಗಾರಿಯನ್ನು ತಡೆದಿದ್ದಾರೆ. ಅಲ್ಲದೆ, ರಸ್ತೆ ದುರಸ್ತಿ ಮಾಡುತ್ತಿದ್ದ ನಿವಾಸಿಗಳ ಮೇಲೆ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.  ಸರ್ವೆ ನಂಬರ್ 65/1, 65/2, 65/1 ರ ಮೂಲಕ ಹಾದುಹೋಗುವ ಈ ರಸ್ತೆಯನ್ನು ಈಗ ಮಣ್ಣು ಹಾಕಿ ಮುಚ್ಚಲಾಗಿದ್ದು, ಇದರಿಂದ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಹಾಗೂ ದೈನಂದಿನ ಸಂಚಾರಕ್ಕೆ ಭಾರಿ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

kadaba times
kadaba times

ನಿವಾಸಿಗಳ ಆಗ್ರಹ: “ಅನಾದಿ ಕಾಲದಿಂದಲೂ ಇದ್ದ ಈ ರಸ್ತೆಯನ್ನು ಪಂಚಾಯತ್ ವತಿಯಿಂದಲೇ ಮರು ನಿರ್ಮಾಣ ಮಾಡಿಕೊಡಬೇಕು ಹಾಗೂ ರಸ್ತೆಗೆ ಅಡ್ಡಲಾಗಿ ಹಾಕಿರುವ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಬಳಿಕ ಬುಧವಾರ   ಸ್ಥಳಕ್ಕೆ ಪ.ಪಂ ಇಂಜಿನಿಯರ್ ಶಿವಕುಮಾರ್ ,ವಾರ್ಡು ಸದಸ್ಯ ಕೃಷ್ಣಪ್ಪ ಪೂಜಾರಿ,ವಿ .ಎ ನಿಶ್ಮಿತಾ,ಗ್ರಾಮ ಸಹಾಯಾ ವಿಜಯ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Articles

Latest Articles