ಸಾಂಜೋ ಸಾವಿಗೆ ನ್ಯಾಯ ಸಿಗಲಿ, ಸತ್ಯ ಹೊರಬರಲಿ:ಕಡಬ ಪೇಟೆಯಲ್ಲಿ ಬೃಹತ್ ಮೌನ ಕ್ಯಾಂಡಲ್ ಮೆರವಣಿಗೆ

kadaba times

ಕಡಬದ ಯುವಕ ಸಾಂಜೋ ಸುನಿಲ್ ಅವರ ನಿಗೂಢ ಸಾವಿನ ಕುರಿತು ಸತ್ಯ ಹೊರಬರಲಿ ಎಂದು ಆಗ್ರಹಿಸಿ ಸಾವಿರಾರು ಜನರು ಕೈಯಲ್ಲಿ ಮೇಣದಬತ್ತಿ ಹಿಡಿದು ಮೌನವಾಗಿ ಹೆಜ್ಜೆ ಹಾಕಿದರು.

kadaba times
uniq

ಇತ್ತೀಚೆಗೆ ಐರ್ಲೆಂಡ್‌ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಕಡಬ ತಾಲೂಕಿನ ಕುಟ್ರುಪ್ಪಾಡಿ ನಿವಾಸಿ ಸಾಂಜೋ ಸುನಿಲ್ ಅವರ ಸಾವಿನ ನಿಗೂಢತೆ ಬಯಲಾಗಬೇಕು ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಡಬದಲ್ಲಿ ಭಾನುವಾರ ಸಂಜೆ ಬೃಹತ್ ಮೌನ ಕ್ಯಾಂಡಲ್ ಮೆರವಣಿಗೆ ನಡೆಯಿತು.

ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ ಹಾಗೂ ಮಲಯಾಳಿ ಫ್ರೆಂಡ್ಸ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಸಾರ್ವಜನಿಕರು ಭಾಗವಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಮೆರವಣಿಗೆಯು ಕಡಬದ ಅನುಗ್ರಹ ಸಭಾಭವನದಿಂದ ಆರಂಭವಾಗಿ ಸೈಂಟ್ ಜೋಕಿಮ್ಸ್ ವಾಣಿಜ್ಯ ಕಟ್ಟಡದ ಮುಂಭಾಗದವರೆಗೆ ಸಾಗಿತು. ಸಾವಿರಾರು ಜನರು ಕೈಯಲ್ಲಿ ಮೇಣದ ಬತ್ತಿ ಹಿಡಿದು ಮೌನವಾಗಿ ಹೆಜ್ಜೆ ಹಾಕುವ ಮೂಲಕ ಸಾಂಜೋ ಅವರ ಸಾವಿನ ಸತ್ಯಾಸತ್ಯತೆ ಹೊರಬರಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.ಅಲ್ಲದೆ   ಐರ್ಲೆಂಡ್‌ನಲ್ಲಿ ನಡೆದ ಘಟನೆಯ ಸಂಪೂರ್ಣ ವರದಿಯನ್ನು ಭಾರತಕ್ಕೆ ತರಿಸಿಕೊಂಡು ತನಿಖೆ ಚುರುಕುಗೊಳಿಸುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪ್ರಮುಖರು ಆಗ್ರಹಿಸಿದರು.

kadaba times
kadaba times

ಪ್ರತಿಭಟನೆಯಲ್ಲಿ ಸಾಂಜೋ ಸುನಿಲ್ ಅವರ ತಂದೆ, ತಾಯಿ, ಕುಟುಂಬದ ಸದಸ್ಯರು ಸೇರಿದಂತೆ ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್‌ನ ಮನೋಜ್, ಕಾರ್ಯದರ್ಶಿ ಕ್ಸೇವಿಯರ್ ಬೇಬಿ ಸೇರಿದಂತೆ ರಾಜಕೀಯ ಪ್ರಮುಖರು, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

ಸಾಂಜೋ ಸುನಿಲ್ ಅವರು ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದರು. ಬಳಿಕ ಪತ್ನಿ ಲಿಷ್ಮಾ ಫಿಲಿಪ್ ಅವರೊಂದಿಗೆ ವಾಸಿಸುವ ಉದ್ದೇಶದಿಂದ ಡಿಪೆಂಡೆಂಟ್ ವೀಸಾದ ಮೂಲಕ ಐರ್ಲೆಂಡ್‌ಗೆ ತೆರಳಿದ್ದರು. ಆದರೆ, ಐರ್ಲೆಂಡ್‌ಗೆ ತಲುಪಿದ ಕೇವಲ 28 ದಿನಗಳಲ್ಲಿ ಅವರ ಮೃತದೇಹ ಸಂಶಯಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಮತ್ತು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ.

Related Articles

Latest Articles