ಮರಣ ಹೊಂದಿದವರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದ ಯೋಜನೆ ಪಡೆದು ವಂಚನೆ

ಮೂವರು ಆರೋಪಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ

kadaba times

ಮರಣ ಹೊಂದಿದವರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರದ ಆಶ್ರಯ ಯೋಜನೆಯ ದುರ್ಲಾಭ ಪಡೆದ ಪ್ರಕರಣದಲ್ಲಿ ಪುತ್ತೂರು ನ್ಯಾಯಾಲಯವು ಮೂವರು ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

kadaba times
uniq

ಮರಣ ಹೊಂದಿದವರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, n ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಮೂವರು ಆರೋಪಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಘಟನೆಯ ಹಿನ್ನೆಲೆ: ಆರ್ಯಾಪು ಗ್ರಾಮದ ಮರಿಕೆ ಗುರುವ ಎಂಬವರ ಮಗ ಭಾಸ್ಕರ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಅವರ ಅಣ್ಣ ಬಾಬು, ಮಗಳು ಜ್ಯೋತಿಗೆ ಸರ್ಕಾರದ ಆಶ್ರಯ ಯೋಜನೆಯಡಿ ಮನೆ ಮಂಜೂರು ಮಾಡಿಸಲು ಸಂಚು ರೂಪಿಸಿದ್ದರು. ಇದಕ್ಕಾಗಿ ಮೃತಪಟ್ಟಿರುವ ತಂದೆ ಗುರುವ ಮತ್ತು ಚಿಕ್ಕಪ್ಪ ಚಲ್ಲ ಎಂಬವರ ಜಂಟಿ ಹೆಸರಿನಲ್ಲಿದ್ದ ಆರ್ಯಾಪು ಗ್ರಾಮದ ಸರ್ವೆ ನಂ. 107/1ಬಿಯ 0.54 ಎಕ್ರೆ ಜಮೀನಿನ ದಾಖಲೆಗಳನ್ನು (RTC) ಬಳಸಿಕೊಂಡಿದ್ದರು.

ನಡೆದಿದ್ದೇನು? ಮೃತಪಟ್ಟವರ ಬದಲಾಗಿ ಆರೋಪಿಗಳ ಫೋಟೋ ಅಂಟಿಸಿ, ಸತ್ತವರ ಹೆಬ್ಬೆಟ್ಟಿನ ಗುರುತಿನ ಬದಲಾಗಿ ಆರೋಪಿಗಳ ಹೆಬ್ಬೆಟ್ಟನ್ನು ನಮೂದಿಸಿ ಫೋರ್ಜರಿ ‘ಜನರಲ್ ಪವರ್ ಆಫ್ ಅಟಾರ್ನಿ’ (GPA) ಮಾಡಿಸಿಕೊಳ್ಳಲಾಗಿತ್ತು. ಇದರ ಮೂಲಕ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1.5 ಲಕ್ಷ ರೂ. ಸರ್ಕಾರಿ ಹಣ ಮಂಜೂರು ಮಾಡಿಸಿಕೊಂಡು ಮನೆ ನಿರ್ಮಿಸಲಾಗಿತ್ತು. ಈ ಮೂಲಕ ಕುಟುಂಬದ ಇತರ ವಾರಸುದಾರರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಲಾಗಿತ್ತು.

kadaba times
kadaba times

ನ್ಯಾಯಾಲಯದ ತೀರ್ಪು: ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಆರ್ಯಾಪು ಗ್ರಾಮದ ಬಾಬು ಮರಿಕೆ, ಅವರ ಮಗಳು ಜ್ಯೋತಿ ಮರಿಕೆ ಮತ್ತು ಶಾಂತಿಗೋಡು ಗ್ರಾಮದ ತನಿಯ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಂದಿನ ಪೊಲೀಸ್ ಉಪ ನಿರೀಕ್ಷಕರಾದ ಉದಯರವಿ ಮತ್ತು ಸಕ್ತಿವೇಲು ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಿಗೆ ಐಪಿಸಿ ಸೆಕ್ಷನ್ 420, 467 ಮತ್ತು 468ರಡಿ: ತಲಾ 3 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ.,ಇತರ ಸೆಕ್ಷನ್‌ಗಳಡಿ: 6 ತಿಂಗಳ ಸಜೆ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಅನ್ವಯವಾಗಲಿವೆ.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕುಮಾರಿ ಚೇತನಾ ದೇವಿ ವಾದ ಮಂಡಿಸಿದ್ದರು.

Related Articles

Latest Articles