
ಕಡಬದ ಶಾಸಕರ ಕಚೇರಿಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಅವರನ್ನು ಭೇಟಿ ಮಾಡಿದ ಕಡಬ ತಾಲೂಕು ಮುಗೇರ ಸಂಘದ ಪದಾಧಿಕಾರಿಗಳು, ‘ದುಡಿ ಆಯನ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿದರು.


ಕಡಬ: ಇಲ್ಲಿನ ಶಾಸಕರ ಕಚೇರಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರಳ್ಯ ಅವರನ್ನು ಕಡಬ ತಾಲೂಕು ಮುಗೇರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸುಳ್ಯದಲ್ಲಿ ಆಯೋಜಿಸಲಾಗಿರುವ ‘ದುಡಿ ಆಯನ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶಾಸಕರಿಗೆ ಹಸ್ತಾಂತರಿಸಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಮುಗೇರ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ‘ದುಡಿ ಆಯನ’ ಕಾರ್ಯಕ್ರಮದ ಕುರಿತು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.


ಆಮಂತ್ರಣ ಪತ್ರಿಕೆ ನೀಡುವ ಸಂದರ್ಭದಲ್ಲಿ ಕಡಬ ತಾಲೂಕು ಮುಗೇರ ಸಂಘದ ಅಧ್ಯಕ್ಷರಾದ ಶಶಿಧರ ಬೊಟ್ಟಡ್ಕ, ಪ್ರಮುಖರಾದ ವಸಂತ ಕುಬಲಾಡಿ, ಹರ್ಷ ಹೊಸಮಠ ಹಾಗೂ ಅಣ್ಣಿ ಪರಪು ಉಪಸ್ಥಿತರಿದ್ದರು. ಶಾಸಕರೊಂದಿಗೆ ಸಂಘಟನೆಯ ವಿವಿಧ ವಿಚಾರಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
