ಪೆರಾಬೆ ಗ್ರಾ.ಪಂ ವ್ಯಾಪ್ತಿ: ಕುಂತೂರು ಪೇಟೆಯಲ್ಲಿ ಬೀದಿ ನಾಯಿಗಳ ಮೇಲೆ ಚಿರತೆ ದಾಳಿ: ಅಂಗಡಿಯ ಜಗಲಿಯ ಮೇಲೆ ರಕ್ತದ ಕಲೆಗಳು ಪತ್ತೆ

kadaba times

ಕಡಬ ತಾಲೂಕಿನ ಕುಂತೂರು ಪೇಟೆಯಲ್ಲಿ ಫೆ. 11ರಂದು ರಾತ್ರಿ ಚಿರತೆಯೊಂದು ಬೀದಿ ನಾಯಿ ಮೇಲೆ ದಾಳಿ ನಡೆಸಿದೆ . ಘಟನೆಯ ಸಿಸಿಟಿವಿ ದೃಶ್ಯ ಮತ್ತು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಓದಿ.

kadaba times
uniq

ಕಡಬ/ಆಲಂಕಾರು:  ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಚಿರತೆ ಸಂಚಾರದ ಭೀತಿ ಹೆಚ್ಚಾಗುತ್ತಿದ್ದು, ಇದೀಗ ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂತೂರು ಪೇಟೆಯಲ್ಲಿ ಚಿರತೆಯೊಂದು ಬೀದಿ ನಾಯಿಗಳ   ದಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಫೆಬ್ರವರಿ 11ರಂದು ರಾತ್ರಿ ಸುಮಾರು 11:30ರ ವೇಳೆಗೆ ಕುಂತೂರು ಪೇಟೆಯಲ್ಲಿ ಸಂಚರಿಸುತ್ತಿದ್ದ ಬೀದಿ ನಾಯಿಗಳ ಮೇಲೆ  ಚಿರತೆಯಂತೆ ಹೋಲುವ ಪ್ರಾಣಿ  ಹಠಾತ್ ದಾಳಿ ನಡೆಸಿದೆ.  ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಾರನೇ ದಿನ ಬೆಳಿಗ್ಗೆ ಸ್ಥಳೀಯ  ಹಾರ್ಡ್‌ವೇರ್ ಅಂಗಡಿಯ ಜಗಲಿಯ ಮೇಲೆ ರಕ್ತದ ಕಲೆಗಳು ಹರಿದಿರುವುದು ಕಂಡುಬಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಚಿರತೆಯು ನಾಯಿಯನ್ನು ಕೊಂದ ಬಳಿಕ ಇಲ್ಲಿಂದಲೇ ಎಳೆದುಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ.

kadaba times
kadaba times

ಎರಡು ದಿನಗಳ ಹಿಂದೆ  ರಾಜೇಶ್ ಎಂಬವರು ಸಿಸಿ ಟಿವಿ ಪರಿಶೀಲಿಸಿದಾಗ ಈ ದೃಶ್ಯ ಸೆರೆಯಾಗಿರುವುದು ಗಮನಕ್ಕೆ ಬಂದಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಘಟನೆ ನಡೆದು ದಿನಗಳೇ ಕಳೆದಿದ್ದರೂ ಮತ್ತು ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದರೂ, ಅರಣ್ಯ ಇಲಾಖೆಯ ಅಧಿಕಾರಿಗಳು ಈವರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಸಾರ್ವಜನಿಕರಿಗೆ ಮುನ್ನೆಚ್ಚರಿಕೆ: ಪರಿಸರದಲ್ಲಿ ಚಿರತೆ ಸಂಚಾರವಿರುವುದರಿಂದ ರಾತ್ರಿ ಸಮಯದಲ್ಲಿ ಮತ್ತು ಮುಂಜಾನೆ ವೇಳೆ ಸಾರ್ವಜನಿಕರು ಒಂಟಿಯಾಗಿ ಓಡಾಡುವುದನ್ನು ತಪ್ಪಿಸಬೇಕು. ಮನೆಯ ಸಾಕುಪ್ರಾಣಿಗಳ ಬಗ್ಗೆಯೂ ಎಚ್ಚರವಿರಲಿ ಎಂದು ಈ ಮೂಲಕ ವಿನಂತಿಸಲಾಗಿದೆ.

Related Articles

Latest Articles