
ಕಡಬ: ವ್ಯಕ್ತಿಯೊಬ್ಬರು ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಮಯ ಅಂಗಡಿಗೆ ಬಂದ ಪರಿಚಯಸ್ಥ ಇಬ್ಬರು ಯುವಕರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿ ಓದಿರಿ:ಅಂಗಡಿಯ ಕೊಠಡಿಯಲ್ಲಿ ಕೂಡಿಹಾಕಿ ಬಾಲಕನಿಗೆ ಲೈಂಗಿಕ ಕಿರುಕುಳ |ಪೊಕ್ಸೊ ಕಾಯ್ದೆಯಡಿ ಆರೋಪಿಯ ಸೆರೆ
ಕೋಡಿಂಬಾಳ ಗ್ರಾಮದ ಎಸ್ ಎಂ ಅಬ್ದುಲ್ ಖಾದರ್ ಅವರು ಡಿ.7 ರಂದು ತಮ್ಮ, ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಅಂಗಡಿಗೆ ಬಂದ ಪರಿಚಯದ ದಕ್ಷತ್ ಮತ್ತು ದೀಕ್ಷಿತ್ ಎಂಬವರು ಅಂಗಡಿಯ ಒಳಗಡೆ ಇರುವ ಕಬ್ಬಿಣದ ಸ್ಟಾಂಡ್ ಮೇಲೆ ಕಾಲು ಇಟ್ಟು ಕುಳಿತಿರುವುದನ್ನು ಪ್ರಶ್ನಿಸಿದ್ದರು.
ಈ ಸುದ್ದಿ ಓದಿರಿ:ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯನಿಗೆ ಮತ್ತೊಮ್ಮೆ ರಕ್ಷಣೆ ನೀಡಲು ಆಗ್ರಹಿಸಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಕೆ


ಆಗ ಆ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಬೆದರಿಕೆ ಒಡ್ಡಿ ಹೋಗಿರುವುದಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ: 87/2025. ಕಲಂ: ಕಲಂ- 115(2),118(1), 352, 351(3), 118(2), 3(5) BNS-2023ಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಸುದ್ದಿ ಓದಿರಿ: ಈಗ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ-ಬಿಜೆಪಿ ಮುಖಂಡೆ ಹೆಸರಲ್ಲಿ ಪೋಸ್ಟ್ ವೈರಲ್
