
ಕಡಬ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಆಶಾ ತಿಮ್ಮಪ್ಪ ಗೌಡ ಅವರು ಮೋದಿ ಅವರನ್ನು ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ ಎಂಬರ್ಥದ ನಕಲಿ ಪೋಸ್ಟ್ ಹಾಕಲಾಗಿತ್ತು.


ದೇಶದ ಪ್ರಧಾನಿ ಉಡುಪಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ನನಗೂ ಅವರನ್ನು ನೋಡುವ ಭಾಗ್ಯ ಸಿಗಬಹುದು ಅಂದುಕೊಂಡಿದ್ದೆ. ಆದರೆ ಈಗ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ” ಎಂಬ ಹೇಳಿಕೆಯನ್ನು ಸೃಷ್ಠಿ ಮಾಡಿ ಪೋಸ್ಟ್ ಮಾಡಲಾಗಿತ್ತು.
ಈ ಸುಳ್ಳು ಪ್ರಚಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಶಾ ತಿಮ್ಮಪ್ಪ ಗೌಡ, ಇದು ತಮ್ಮ ತೇಜೋವಧೆ ಮಾಡುವ ದುರುದ್ದೇಶದಿಂದಲೇ ಮಾಡಲಾದ ಕೃತ್ಯವಾಗಿದೆ. ತಮ್ಮ ಹೆಸರಿಗೆ ಕಳಂಕ ತರುವಂತಹ ಈ ಕೃತ್ಯದ ಹಿಂದೆ ರಾಜಕೀಯ ಷಡ್ಯಂತ್ರ ಇರುವ ಸಾಧ್ಯತೆ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.


ದೂರು ನೀಡಿರುವ ಅವರು ಪೋಸ್ಟರ್ ಗಳನ್ನು ತಯಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
