
ಪಂಜ/ಸುಬ್ರಹ್ಮಣ್ಯ: ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮಲಗಿದ್ದಲಿಯೇ ಮೃತಪಟ್ಟ ರೀತಿಯಲ್ಲಿ ಪತ್ತೆಯಾದ ಘಟನೆ ಪಂಜದಿಂದ ವರದಿಯಾಗಿದೆ.


ಸುಳ್ಯ ತಾಲೂಕು ಐವತ್ತೋಕ್ಲು ಗ್ರಾಮದ ದರಣೇಶ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಪಂಜದಲ್ಲಿರುವ ಮಂಗಳ ಬಾರ್ನಲ್ಲಿ ಸ್ವಚ್ಚತಾ ಕೆಲಸ ಮಾಡಿಕೊಂಡಿದ್ದು ವಾರಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದುರು.ಡಿ. 5 ರಂದು ಮನೆಗೆ ಬಂದಿದ್ದು ಅವರಿಗೆ ಸ್ವಲ್ಪ ಜ್ವರವಿದ್ದು ಈ ಬಗ್ಗೆ ಆಸ್ಪತ್ರೆಯಿಂದ ಔಷದಿ ತೆಗೆದುಕೊಂಡಿದ್ದರು ಬಳಿಕ ಮರುದಿನ ವಾಪಸ್ ಕೆಲಸಕೆಂದು ಬಾರ್ಗೆ ಹೊಗಿದ್ದರು.


ಡಿ.7 ರಂದು ಬಾರ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮನೆಯವರಿಗೆ ದೂರವಾಣಿ ಕರೆ ಮಾಡಿ “ ನಿನ್ನೆ ರಾತ್ರಿ ಸಮಯ ಸುಮಾರು 10 ಗಂಟೆಗೆ ಊಟ ಮಾಡಿ ಮಲಗಿದವರು ಬೆಳಿಗ್ಗೆ ಬಾರ್ ಸ್ವಚ್ಚತಾ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಗುಡಿಸಲು ಹೋದಾಗ ಮಲಗಿದ್ದಲಿಯೇ ಇದ್ದು ಅವರನ್ನು ಕರೆದಾಗ ಏಳದೆ ಯಾವುದೇ ಪ್ರತಿಕ್ರಿಯಸದೆ ಮೃತಪಟ್ಟಂತೆ ಕಂಡು ಬಂದಿರುವುದಾಗಿ ತಿಳಿಸಿದ್ದಾರೆ.
ಮನೆಯವರೊಂದಿಗೆ ಅಲ್ಲಿಗೆ ತೆರಳಿ ನೋಡಿದಾಗ ಪಿರ್ಯಾದಿದಾರರ ಗಂಡ ಮೃತ ತನ್ನ ಪಟ್ಟಿರುವುದು ತಿಳಿದಿದೆ. ಅನಾರೋಗ್ಯದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಮೃತಪಟ್ಟಿರಬಹುದಾಗಿದ್ದು, ಈ ಬಗ್ಗೆ ಮೃತರ ಪತ್ನಿ ಶ್ರೀಮತಿ ಜಲಜಾಕ್ಷಿ ಎಂಬವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್ ನಂಬ್ರ: 36/2025 ಕಲಂ: 194 BNSS ಯಂತೆ ಪ್ರಕರಣ ದಾಖಲಾಗಿರುತ್ತದೆ.
