ಕಡಬ: ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ ರಾಮಕುಂಜದ ವಿದ್ಯಾರ್ಥಿನಿಯರು

kadaba times

ಪುತ್ತೂರು: ಕಳೆದ ಸೆ.27,28ರಂದು ರಾಮಕುಂಜದಲ್ಲಿ ನಡೆದ ವಿಭಾಗ ಮಟ್ಟದ 17ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಬೆಂಗಳೂರು ಬಸವೇಶ್ವರ ನಗರದಲ್ಲಿ ನಡೆಯುವ ರಾಜ್ಯಮಟ್ಟದ ಕಬಡ್ಡಿ
ಪಂದ್ಯಾಟಕ್ಕೆ ವಿಮಾನದ ಮೂಲಕ ಪಯಣ ಬೆಳೆಸಿದ್ದಾರೆ.

kadaba times

ವಿಮಾನಯಾನದ ವೆಚ್ಚವನ್ನು ಕೇಶವ ಅಮೈ ಭರಿಸಿದ್ದು   9 ಮಂದಿ ಕ್ರೀಡಾಪಟುಗಳನ್ನು ಹಾಗೂ ಇಬ್ಬರು ಕೋಚ್‌ಗಳನ್ನು ನ.9ರಂದು ವಿಮಾನದ ಮೂಲಕ ಪಂದ್ಯಾಟಕ್ಕೆ ಕಳುಹಿಸಿದ್ದಾರೆ.

uniq
kadaba times

ಕ್ರೀಡಾಪಟುಗಳಾದ ಧನ್ವಿ, ದೀಕ್ಷಾ, ರಮ್ಯ, ತನುಜ, ಸಿಂಚನ, ಪ್ರತೀಕ್ಷ, ದೀಕ್ಷಾಶ್ರೀ, ಶ್ರೇಯ ಮತ್ತು ಶ್ರಾವ್ಯ ಹಾಗೂ ತರಬೇತುದಾರ ಜಸ್ವಂತ್ ಗೌಡ, ಟೀಮ್ ಮ್ಯಾನೇಜರ್ ಪ್ರಫುಲ್ಲ ಎ ಅವರು ವಿಮಾನಯಾನದ ಮೂಲಕ ಪಯಣಿಸಿದ್ದಾರೆ.

Related Articles

Latest Articles