ನೆಟ್ಟಣ ರೈಲ್ವೇ ಓವರ್ ಬ್ರಿಡ್ಜ್ ಬಳಿ  ವ್ಯಕ್ತಿಯೊಬ್ಬರ  ಮೃತ ದೇಹ ಪತ್ತೆ

kadaba times

ನೆಟ್ಟಣ: ಇಲ್ಲಿನ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ  ನೆಟ್ಟಣ ರೈಲ್ವೇ ಓವರ್ ಬ್ರಿಡ್ಜ್ ಬಳಿ  ವ್ಯಕ್ತಿಯೊಬ್ಬರು  ಮೃತ ಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times

ಮೃತಪಟ್ಟ  ವ್ಯಕ್ತಿಯನ್ನು ತಮಿಳುನಾಡು ಮೂಲದ ನೀಲಗಿರೀಸ್ ಇಂದ್ರಾ ನಗರ ನಿವಾಸಿ ಷಣ್ಮುಗನಾಥನ್ (65) ಎಂದು ಗುರುತಿಸಲಾಗಿದೆ.

ತಮಿಳುನಾಡಿನಿಂದ ಬಿಳಿನೆಲೆ ಗ್ರಾಮದ ವಾಲ್ತಾಜೆಯಲ್ಲಿರುವ ಸಂಬಂಧಿಕರ ಮನೆಗೆ ಬಂದು ವಾಪಾಸು ಊರಿಗೆ ಹೋಗದೆ ನೆಟ್ಟಣ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ಮದ್ಯ ಸೇವಿಸಿ ಅಲ್ಲೇ ಅಂಗಡಿಯ ಬದಿಯಲ್ಲಿ ಮಲಗುತ್ತಿದ್ದರು ಎನ್ನಲಾಗಿದೆ.

ನ.7  ರಂದು  ಸಂಜೆ ನೆಟ್ಟಣ ಪೇಟೆಯಲ್ಲಿ ಓಡಾಟ ನಡೆಸಿದ್ದರು.  ನ.8 ರಂದು ಸ್ಥಳೀಯರೊಬ್ಬರು   ನೆಟ್ಟಣ ಪೇಟೆಯಿಂದ ದೂರವಾಣಿ ಕರೆ ಮಾಡಿ  ನೆಟ್ಟಣ ರೈಲ್ವೇ ಓವರ್ ಬ್ರಿಡ್ಜ್ ಬಳಿ ಡಾಮಾರು ರಸ್ತೆಯ ಬದಿಯಲ್ಲಿ    ಬಿದ್ದುಕೊಂಡಿರುವುದಾಗಿ ಸಂಬಂಧಿ ರೇಗನ್ ಎಂಬವರಿಗೆ ತಿಳಿಸಿದ್ದರು.

uniq
kadaba times

ಬಂದು ನೋಡಿದ ಸಂದರ್ಭ  ಮೃತಪಟ್ಟ ಸ್ಥಿತಿಯಲ್ಲಿದ್ದು  ಬೆನ್ನಿಗೆ, ತರಚಿದ ಗಾಯ ಸೊಂಟದ ಬಳಿ ತರಚಿದ ಗಾಯ ತಲೆಯ ಬಲ ಬದಿಯಲ್ಲಿ  ಗಾಯಗಳಾಗಿರುವುದು ಕಂಡು ಬಂದಿರುತ್ತದೆ. ರಾತ್ರಿ ಸಮಯ ಬಿದ್ದು ಗಾಯಗೊಂಡು ಅಥವಾ  ಯಾವುದೋ ಅಪಘಾತದಿಂದ ಮೃತಟ್ಟಿರಬಹುದು ಎನ್ನಲಾಗಿದೆ.

ಈ ಬಗ್ಗೆ ವಾಲ್ತಾಜೆಯ  ರೇಗನ್  ಎಂಬವರು ನೀಡಿದ ದೂರಿನಂತೆ  ಕಡಬ ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ 33/2025 ಕಲಂ:194 (3) BNSS-2023. ಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Latest Articles