ಕುಡಿಯುವ ನೀರಿಗೆ ಮಲವಿಸರ್ಜನೆ ಮಾಡಿ ಜಾತಿ ನಿಂದನೆ: ಆರೋಪಿಗೆ ಶಿಕ್ಷೆ ಪ್ರಕಟಿಸಿದ ಪುತ್ತೂರು ಕೋರ್ಟ್

kadaba times

ಪ್ರಮುಖ ಸುದ್ದಿ: ಮಹಿಳೆಯೋರ್ವರು ಕುಡಿಯಲು ಮತ್ತು ಗೃಹ ಬಳಕೆಗಾಗಿ ಶೇಖರಿಸಿಟ್ಟ ನೀರಿನ ಬ್ಯಾರೆಲ್‌ನಲ್ಲಿ ಮಲವಿಸರ್ಜನೆ ಮಾಡಿ ನೀರನ್ನು ಮಲಿನ ಮಾಡಿ ಜಾತಿನಿಂದನೆಗೈದ  ಆರೋಪ ಸಾಬೀತಾಗಿದ್ದು ಆರೋಪಿಗೆ ಶಿಕ್ಷೆ ವಿಧಿಸಿ ದ.ಕ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

kadaba times
uniq

ಈ ಸುದ್ದಿಯನ್ನು ಓದಿರಿ: ಅಪ್ರಾಪ್ತ ಬಾಲಕಿ ಗರ್ಭಿಣಿ: ಯುವಕನ ವಿರುದ್ದ ಪ್ರಕರಣ ದಾಖಲು

ಸುಳ್ಯ ತಾಲೂಕು ಕೆಮ್ರಾಜೆಯ ಗಿರೀಶ  ಎಂಬಾತ 2017 ರ ಮಾರ್ಚ್ 3 ರರಂದು  3 ಪರಿಶಿಷ್ಟ ಜಾತಿಗೆ ಸೇರಿದ ಮರ್ಕಂಜ ಗ್ರಾಮದ ಗುಂಡಿಮಜಲಿನ ಮಹಿಳೆಯೋರ್ವರು ಕುಡಿಯಲು ಮತ್ತು ಗೃಹ ಬಳಕೆಗಾಗಿ ಶೇಖರಿಸಿಟ್ಟ ನೀರಿನ ಬ್ಯಾರೆಲ್‌ನಲ್ಲಿ ಮಲವಿಸರ್ಜನೆ ಮಾಡಿ ನೀರನ್ನು ಮಲಿನ ಮಾಡಿದ್ದ

ಈ ಪ್ರ ಕರಣದಲ್ಲಿ ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾಗಿದ್ದ ಶ್ರೀನಿವಾಸ್.ಬಿ.ಎಸ್ ರವರು ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣಗಳಲ್ಲಿ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳ ಸಾಕ್ಷ್ಯವನ್ನು ಪರಿಶೀಲಿಸಿ ಹಾಗೂ ವಾದ ವಿವಾದವನ್ನು ಆಲಿಸಿ ದೂರುದಾರರ ಸಾಕ್ಷ್ಯವನ್ನು ಪ್ರಮುಖವಾಗಿ ಪರಿಗಣಿಸಿ ಆರೋಪಿತ ಕೃತ್ಯ ಎಸಗಿರುವುದು ಸಾಬೀತಾಗಿದ್ದು, 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ಮಂಗಳೂರು(ಪೀಠಾಸೀನ ಪುತ್ತೂರು) ಇಲ್ಲಿನ ನ್ಯಾಯಾಧೀಶರಾದ ಸರಿತಾ, ಡಿ ಇವರು ಆರೋಪಿತನಿಗೆ 6 ತಿಂಗಳ ಶಿಕ್ಷೆ ಹಾಗೂ ದಂಡ ವಿಧಿಸಿ ನ.27 ರಂದು ತೀರ್ಪು ನೀಡಿದ್ದಾರೆ.

kadaba times
kadaba times

ಈ ಸುದ್ದಿಯನ್ನು ಓದಿರಿ: ಕುಕ್ಕೆ ಸುಬ್ರಹ್ಮಣ್ಯ: ತೇರು ಎಳೆಯುವುದನ್ನು ನೋಡುತ್ತಿರುವಾಗಲೇ ಮಹಿಳೆಯ ಚಿನ್ನದ ಮಾಂಗಲ್ಯ ಸರ ಎಗರಿಸಿದ ಕಳ್ಳರು

ಅಭಿಯೋಜನೆಯ ಪರವಾಗಿ ಜಯಂತಿ. ಕೆ. ಭಟ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಬಂದ ಮಹಿಳೆ ಮತ್ತು ಅವರ ಗಂಡನಿಗೆ ಜಾತಿನಿಂದನೆ ಮಾಡಿ, ಬೈದು ಅವಮಾನ ಮಾಡಿ ದೌರ್ಜನ್ಯ ಎಸಗಿದ್ದರಿಂದ ಆರೋಪಿತನ ವಿರುದ್ಧ ಪ.ಜಾ ಮತ್ತು ಪ.ಪ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

Related Articles

Latest Articles