ಕಡಬ: ಲೋಕಾಯುಕ್ತ ಅಧಿಕಾರಿ ಕೈಯಲ್ಲಿಯೇ ಕಿತ್ತು ಬಂದ ಟಾಯ್ಲೆಟ್ ನಲ್ಲಿದ್ದ ನಳ್ಳಿ!

kadaba times

ಸರಕಾರಿ ಅಧಿಕಾರಿಗಳು ಹಾಗೂ ಸಿಬಂದಿಗಳು ತಮ್ಮ ಕಚೇರಿಗಳಿಗೆ ಬರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇಲೆ ಮಾಡಿಕೊಡಬೇಕು. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಕ್ಕೆ ಅಧಿಕಾರಿಗಳು ಲಂಚ ಪಡೆಯುವುದು ಮಾತ್ರ ಅಪರಾಧವಲ್ಲ, ಸ್ವಜನಪಕ್ಷಪಾತ,  ದುರಾಡಳಿತ, ಸಾರ್ವಜನಿಕರನ್ನು ವಿನಾಕಾರಣ ಸತಾಯಿಸುವುದು ಕೂಡಾ ಲೋಕಾಯುಕ್ತದಲ್ಲಿ ಅಪರಾಧವಾಗುತ್ತದೆ.

kadaba times
uniq

ಕಡಬ: ಕಡಬ ತಾಲೂಕು ಕಚೇರಿಯ ಸಭಾಂಗಣದಲ್ಲಿ ಮಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ನಡೆದ ಸಾರ್ವಜನಿಕ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ 9 ಅರ್ಜಿಗಳು ಬಂದಿವೆ.  ಕಂದಾಯ, ಸರ್ವೆ, ಮೆಸ್ಕಾಂ , ಅರಣ್ಯ, ಕೆಎಸ್ಸಾರ್ಟಿಸಿ ಇಲಾಖೆಗಳಿಗೆ ಸಂಬಂಧಪಟ್ಟ ಒಟ್ಟು ಅವುಗಳ ಪೈಕಿ 2 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು.

ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದ ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್ ಪಿ. ಅವರು  . ಪೋಡಿ, ಪಹಣಿ ಪತ್ರದಲ್ಲಿ ತಿದ್ದು ಪಡಿ ಹಾಗೂ ಗ್ರಾಮ ಮಟ್ಟದಲ್ಲಿ ಆಗುವ ಸಣ್ಣ ಪುಟ್ಟ ಕೆಲಸಗಳನ್ನು ಸಾರ್ವಜನಿಕರಿಗೆ ಕೂಡಲೇ ಮಾಡಿ ಕೊಡಬೇಕು. ಗ್ರಾಮ ಮಟ್ಟದಲ್ಲಿ ಆಗುವ ಕೆಲಸ ಕಾರ್ಯಗಳನ್ನು ತಾಲೂಕು ಕಚೇರಿ ತನಕ ತರಬಾರದು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು 15 ದಿನಗಳಿಗೊಮ್ಮೆ ಸಭೆ ನಡೆಸಿ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ನೀಡಿದ ಮನವಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕಾನೂನು ರೀತಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಅಸಾಧ್ಯವಾಗದಿರುವುದಕ್ಕೆ ಹಿಂಬರಹ ನೀಡಬೇಕು. ಯಾವುದೇ ಕಾರಣಕ್ಕೂ ಜನರನ್ನು ಅಲೆದಾಡಿಸಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಶಿರಸ್ತೇದಾರ್ ಶಾಯದುಲ್ಲಾಖಾನ್, ಕಂದಾಯ ನಿರೀಕ್ಷಕ ಪೃಥ್ವಿರಾಜ್ , ಲೋಕಾಯುಕ್ತ ಸಿಬಂದಿಗಳಾದ ಮಹೇಶ್, ರಾಜಪ್ಪ ಗೋಟಿ, ಪವಿತ್ರಾ, ರಾಜಶೇಖರ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

kadaba times
kadaba times

ಜಾಗದ ಬಗ್ಗೆ ತಿಳಿದುಕೊಂಡು ಕಾಮಗಾರಿ ನಡೆಸಿ: ಪಂಚಾಯತ್ ಸೇರಿದಂತೆ ಯಾವುದೇ ಇಲಾಖೆಯವರು ಸರಕಾರದ ಅನುದಾನ ಬಳಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಮೊದಲು ಕಾಮಗಾರಿ ನಡೆಸುವ ಸ್ಥಳದ ಕುರಿತು ಸ್ಪಷ್ಟ ಮಾಹಿತಿ ಹೊಂದಿರಬೇಕು ಎಂದು ಲೋಕಾಯುಕ್ತ ಅಧಿಕಾರಿ ತಿಳಿಸಿದರು. ಪಂಚಾಯತ್‌ನವರು ಅರಣ್ಯ ಜಾಗದಲ್ಲಿ ಮೋರಿ ನಿರ್ಮಿಸುತ್ತಿದ್ದಾರೆಂದು ಬಂದ ಅರ್ಜಿಯ ಬಗ್ಗೆ, ಕಾಮಗಾರಿ ನಡೆದ ಬಳಿಕ ಅರಣ್ಯ ಇಲಾಖೆಯವರು ಬಂದು ತಡೆಯೊಡ್ಡಿದರೆ ಪೋಲಾಗುವುದು ನಮ್ಮದೇ ತೆರಿಗೆಯ ಹಣ. ಅದರ ಬದಲು ಕಾಮಗಾರಿ ನಡೆಸುವ ಮೊದಲೇ ಜಾಗ ಯಾರಿಗೆ ಸೇರಿದ್ದೆಂದು ತಿಳಿದುಕೊಂಡು ಮುಂದುವರೆಯಬೇಕು ಎಂದು ಕಾಮಗಾರಿ ನಡೆಸಿದ ಸ್ಥಳದ ಕುರಿತು ಅರಣ್ಯ ಇಲಾಖೆ ಮತ್ತು ಪಂಚಾಯತ್‌ನ ಮಧ್ಯೆ ಇರುವ ತಕರಾರಿಗೆ ಸಂಬಂಧಿಸಿದ ಪ್ರಕರಣದ ತನಿಖೆಯ ವೇಳೆ ಲೋಕಾಯುಕ್ತ ಅಧಿಕಾರಿ ಅಭಿಪ್ರಾಯಪಟ್ಟರು.

ಲೋಕಾಯುಕ್ತ ಅಧಿಕಾರಿ ಕೈಯಲ್ಲಿ ಕಿತ್ತು ಬಂದ ಟಾಯ್ಲೆಟ್ ಪೈಪ್:  ಜನಸಂಪರ್ಕ ಸಭೆ ಆರಂಭವಾಗುವ ಮೊದಲು ತಾಲೂಕು ಆಡಳಿತ ಸೌಧವನ್ನು ವೀಕ್ಷಣೆ ನಡೆಸಿದ ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್ ಅವರು ಸೌಧದೊಳಗಿನ ಶೌಚಾಲಯದಲ್ಲಿನ ನಳ್ಳಿಯಲ್ಲಿ ನೀರು ಸೋರುತ್ತಿರುವುದನ್ನು ಬಂದ್ ಮಾಡಲು ಹೋದಾಗ ನಳ್ಳಿ ಮುರಿದು ಪೈಪ್‌ನಿಂದ ನೀರು ಚಿಮ್ಮಿ ತೊಯ್ದು ಹೋದ ಘಟನೆ ನಡೆಯಿತು. ಬಳಿಕ ಸಭೆಯಲ್ಲಿ ಆ ವಿಷಯವನ್ನು ಪ್ರಸ್ತಾಪಿಸಿದ ಡಿವೈಎಸ್ಪಿ, ಶೌಚಾಲಯ ದುರ್ನಾತ ಬೀರುತ್ತಿದ್ದುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸರಕಾರ ಇಷ್ಟೊಂದು ಸುಂದರ ಮತ್ತು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದರೂ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಕುರಿತು ಖೇದ ವ್ಯಕ್ತಪಡಿಸಿ, ಶುಚಿತ್ವದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Related Articles

Latest Articles