ಸೊಪ್ಪು ತರಲು ಕಾಡಿಗೆ ತೆರಳಿದ ವೇಳೆ ಕಾಡಾನೆ ದಾಳಿ: ಇಬ್ಬರು ಸ್ಥಳದಲ್ಲೇ ಮೃತ್ಯು

kadaba times

ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಂಗಳೂರು ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾ.ಪಂ.ವ್ಯಾಪ್ತಿಯ ಮೂಡುಬ ಗ್ರಾಮದ ಎಲ್ಸಾರ್ ಬಳಿ ನಡೆದಿದೆ.

kadaba times
uniq

ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಆನೆ ತುಳಿತಕ್ಕೆ ಸಿಲುಕಿ ಮೃತಪಟ್ಟವರು. ಶುಕ್ರವಾರ ಬೆಳಿಗ್ಗೆ ಸೊಪ್ಪು ತರಲು ಕಾಡಿಗೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಬೆಳಗಿನ ಜಾವ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬರುವಂತೆ ಆಕ್ರೋಶಗೊಂಡ ಗಾಮಸ್ಥರು ಪಟ್ಟು ಹಿಡಿದಿದ್ದಾರೆ.

kadaba times
kadaba times

ಈ ಭಾಗದಲ್ಲಿ ಕಾಡಾನೆಗಳ ಉಪಟಳ ಅನೇಕ ವರ್ಷಗ ಳಿಂದ ನಡೆಯುತ್ತಿದ್ದು, ಇದುವರೆಗೆ ಅನೇಕ ಜೀವಗಳನ್ನು ಬಲಿ ಪಡೆದುಕೊಂಡಿವೆ. ಹರೀಶ್ ಶೆಟ್ಟಿ ಪತ್ನಿ ಇಬ್ಬರು ಪುತ್ರಿಯರನ್ನು ಹಾಗೂ ಉಮೇಶ್ ಗೌಡ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ

Related Articles

Latest Articles