ಬಿಸಿಲೆ ಘಾಟ್ ನಲ್ಲಿ ಮದುವೆಗೆ ಹೊರಟ ವ್ಯಾನ್ ಅಪಘಾತ ಪ್ರಕರಣ: ಓರ್ವ ಸಾ*ವು, 6 ಜನ ಗಂಭೀರ

kadaba times

ಕುಕ್ಕೆ ಸುಬ್ರಹ್ಮಣ್ಯ: ಸಕಲೇಶಪುರ  ತಾಲೂಕಿನ ವನಗೂರಿನಿಂದ ಮದುವೆಗೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟಿದ್ದ ವಾಹನವೊಂದು (ವ್ಯಾನ್) ಚಾಲಕನ ನಿಯಂತ್ರಣ ತಪ್ಪಿ ಬಿಸಿಲೆ ಘಾಟ್ ಸಮೀಪ 20 ಅಡಿ ಎತ್ತರದಿಂದ ಮಗುಚಿ ಬಿದ್ದ ಘಟನೆ ಅ.30ರ ಗುರುವಾರ ಬೆಳಿಗ್ಗೆ ನಡೆದಿತ್ತು.

kadaba times
uniq

ಈ ಪರಿಣಾಮ ಓರ್ವ ಮೃತಪಟ್ಟು, 6 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಶಿವರಾಜ್ ( 50) ಮೃತಪಟ್ಟವರು. ಈ ಬಗ್ಗೆ ಹಾಸನ ಜಿಲ್ಲೆಯ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ವಾಹನದಲ್ಲಿ ಒಟ್ಟು ಸುಮಾರು 30 ಮಂದಿಯಿದ್ದು, 20 ಮಂದಿ ಗಾಯಗೊಂಡಿದ್ದು, ಇದರಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿತ್ತು. ಅವರಲ್ಲಿ ಶಿವರಾಜ್ ಎಂಬವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿ ಭಾಗಿಯಾಗಬೇಕಾದವರು ಶೋಕದ ಮನೆಯಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

kadaba times
kadaba times

ಅಪಘಾತಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯ:  ಬಿಸಿಲೆ  ಘಾಟ್ ಡಬಲ್ ಟರ್ನಲ್ಲಿ   ರಸ್ತೆಯ ಪಕ್ಕದಲ್ಲಿ ತೆಗೆದ ಚರಂಡಿ ಮುಚ್ಚದೆ 15 ದಿನಗಳಿಂದ ಹಾಗೆ ಬಿಟ್ಟಿದ್ದು ಕಾಮಗಾರಿ ಜಾಗದಲ್ಲಿ ಯಾವುದೇ ನಾಮಫಲಕ ಹಾಕದೆ ಕಿರಿದಾದ ಸಿಮೆಂಟ್ ರಸ್ತೆ ಚರಂಡಿ ಮುಚ್ಚದೆ ಇರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.  ಲೋಕೋಪಯೋಗಿ  ಇಲಾಖೆ ತಡೆಗೋಡೆ ಕಾಮಗಾರಿ ಮಾಡುವಾಗ  ವಲಯ ಅರಣಾಧಿಕಾರಿಯವರು  ಜೆಸಿಬಿಯನ್ನು ವಶಕ್ಕೆ ಪಡೆದಿದ್ದು ಕಾಮಗಾರಿಗೆ ಅಡ್ಡಿಪಡಿಸಿರುವುದೇ  ಅಪಘಾತಕ್ಕೆ ಕಾರಣ ಎನ್ನಲಾಗಿದೆ.  ಈ ಭಾಗದಲ್ಲಿ ಬೆಳಗಿನ ಸಮಯ  ಮಂಜು ಮುಸುಕಿದ ವಾತಾವರಣ ಇದ್ದ ಕಾರಣ ಎದುರುಗಡೆ ಬಂದ ವಾಹನಕ್ಕೆ ಜಾಗ ಬಿಡುವಾಗ  ಚಾಲಕನ ನಿಯಂತ್ರಣ ತಪ್ಪಿದ ಬಸ್ 30 ಅಡಿ ಆಳಕ್ಕೆ ಮಗುಚಿ ಬಿದ್ದಿದೆ.    ಬಿಸಿಲೆ ಘಾಟಿನ ರಸ್ತೆ ಕಿರಿದಾಗಿದ್ದು  ಸೂಕ್ತ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Related Articles

Latest Articles