ಕಾಣಿಯೂರು ರೈಲು ನಿಲ್ದಾಣ ಏಲಡ್ಕ ಪ್ರದೇಶಕ್ಕೆ ಸ್ಥಳಾಂತರಿಸಿ ಟರ್ಮಿನಲ್ ನಿರ್ಮಿಸಿ: ಕೇಂದ್ರ ರಾಜ್ಯ ರೈಲ್ವೆ ಸಚಿವರಿಗೆ ಸುಳ್ಯ ಶಾಸಕಿ ಮನವಿ

kadaba times

ಕಡಬ:  ಮಂಗಳೂರು–ಹಾಸನ ರೈಲು ಮಾರ್ಗದ ಕಾಣಿಯೂರು ನಿಲ್ದಾಣವನ್ನು ಏಲಡ್ಕ ಪ್ರದೇಶಕ್ಕೆ ಸ್ಥಳಾಂತರಿಸಿ ಅಲ್ಲಿ ಪೂರ್ಣ ಪ್ರಮಾಣದ ರೈಲು ಟರ್ಮಿನಲ್‌ ನಿಲ್ದಾಣ ನಿರ್ಮಿಸಲು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

kadaba times
uniq

ಕಾಣಿಯೂರು ನಿಲ್ದಾಣವು ರಾಜ್ಯ ಹೆದ್ದಾರಿ ಹತ್ತಿರವಿದ್ದರೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ .ಈ ಹಿನ್ನೆಲೆಯಲ್ಲಿ ಏಲಡ್ಕದಲ್ಲಿ ಹೊಸ ಟರ್ಮಿನಲ್ ನಿರ್ಮಾಣವಾದರೆ ನೈರುತ್ಯ ರೈಲ್ವೆಗೆ ದೂರದ ರೈಲುಗಳನ್ನು ಪ್ರಾರಂಭಿಸಲು ಅನುಕೂಲವಾಗುತ್ತದೆ ಹಾಗೂ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣಗಳ ಮೇಲಿನ ದಟ್ಟಣೆಯೂ ಕಡಿಮೆಯಾಗಲಿದೆ. ಜೊತೆಗೆ ಪುತ್ತೂರು, ಸುಬ್ರಹ್ಮಣ್ಯ ಮತ್ತು ಮಂಗಳೂರು ನಿಲ್ದಾಣಗಳಿಗೆ ಸ್ಯಾಟಲೈಟ್ ಟರ್ಮಿನಲ್‌ ಆಗಿ ಸಹಕಾರಿಯಾಗಲಿದೆ.

ಈ ಯೋಜನೆ ಯಾಕೆ ಅಗತ್ಯ ?

kadaba times
kadaba times
  1.  ಏಲಡ್ಕದಲ್ಲಿ ಟರ್ಮಿನಲ್ ನಿರ್ಮಾಣದಿಂದ ಮಂಗಳೂರು ನಿಲ್ದಾಣಗಳ ಮೇಲಿನ ರೈಲು ದಟ್ಟಣೆ ಕಡಿಮೆಯಾಗುತ್ತದೆ. ಟರ್ಮಿನಲ್ ನಿರ್ಮಿಸಲು ಪಿಟ್ ಲೈನ್ ನಿರ್ಮಾಣ ಮಾಡಲು ಹಾಗೂ ಇತರ ರೈಲಿನ ಕಾರ್ಯಗಳಿಗಾಗಿ ಎಕ್ಕರೆಗಟ್ಟಲೆ ಸ್ಥಳವು ಇದೆ.
  2. ಸ್ಥಳೀಯ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ.
  3. ಗ್ರಾಮೀಣ ಪ್ರದೇಶಕ್ಕೂ ನಗರಮಟ್ಟದ ಸಾರಿಗೆ ಸೌಲಭ್ಯಗಳು ಲಭ್ಯವಾಗುತ್ತವೆ.
  4. ಮಂಗಳೂರಿಗೆ ಬಂದು ಹೋಗುವ ದೂರದ ರೈಲುಗಳ ವಿಸ್ತರಣೆಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ.

.ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮಾನ್ಯ ಶಾಸಕರು ರೈಲ್ವೆ ಸಚಿವರಿಗೆ ವಿನಂತಿಸಿದ್ದಾರೆ. ಮನವಿ ನೀಡುವ ವೇಳೆ   ,ಕಾಣಿಯೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಗಣೇಶ ಉದನಡ್ಕ , ರೈಲ್ವೆ ಬಳಕೆದಾರರ ಸಂಘದ ಸದಸ್ಯ ಶಂಕರನಾರಾಯಣ ಭಟ್ ಕುಂಞ್ಞಹಿತ್ಲು ಉಪಸ್ಥಿತರಿದ್ದರು.

Related Articles

Latest Articles