
ಕಡಬ ಪಟ್ಟಣ: ಸಂಚಾರಕ್ಕೆ ಅಯೋಗ್ಯವಾಗಿರುವ ಮಡ್ಯಡ್ಕ-ಚಾಕೋಟೆ ಮತ್ತು ಕೋಡಿಂಬಾಳ-ನಾಕೂರು ಗಯ ರಸ್ತೆಗಳನ್ನು ತುರ್ತು ದುರಸ್ತಿ ಮಾಡುವಂತೆ ಸೌಭಾಗ್ಯ ಮಹಿಳಾ ಮಹಾಸಂಘದ ಸದಸ್ಯರು ಪ.ಪಂ ಅಧ್ಯಕ್ಷೆ ತಮನ್ನಾ ಜುಬಿನ್ ಹಾಗೂ ಮುಖ್ಯಾಧಿಕಾರಿ ಲೀಲಾವತಿಗೆ ಮನವಿ ಸಲ್ಲಿಸಿದ್ದಾರೆ.


ಕಳೆದ ಹಲವು ತಿಂಗಳಿಂದ ಈ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ಶಾಲಾ ಮಕ್ಕಳು, ವೃದ್ಧರು, ರೋಗಿಗಳಿಗೆ ದಿನನಿತ್ಯದ ಸಂಚಾರ ಕಷ್ಟಕರವಾಗಿದೆ. ಕೂಡಲೇ ರಸ್ತೆಗಳ ದುರಸ್ತಿಯನ್ನು ಮಾಡಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.


ಮನವಿ ಸ್ವೀಕರಿಸಿದ ಅಧ್ಯಕ್ಷೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮಹಿಳಾ ಮಹಾಸಂಘದ ಅಧ್ಯಕ್ಷೆ ರೂಪಶ್ರೀ, ಕಾರ್ಯದರ್ಶಿ ಪ್ರಿಯಾ ಸೇರಿದಂತೆ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.
