ಉಪ್ಪಿನಂಗಡಿ ಬಳಿ ಲಾರಿ ಚಾಲಕ ಅಸ್ವಸ್ಥ: ಆಸ್ಪತ್ರೆಗೆ ಕೊಂಡೊಯ್ದರೂ ಬದುಕಲಿಲ್ಲ

kadaba times

ಉಪ್ಪಿನಂಗಡಿ/ನೆಲ್ಯಾಡಿ:  ಲಾರಿ ಚಾಲಕರೊಬ್ಬರು ಉಪ್ಪಿನಂಗಡಿ ಸಮೀಪದ ಪಂಜಳದಲ್ಲಿ ಅಸ್ವಸ್ಥಗೊಂಡು  ಆಸ್ಪತ್ರೆಗೆ ದಾಖಲಾಗಿ ಬಳಿಕ   ಮೃತಪಟ್ಟ ಘಟನೆ ಅ.9ರಂದು ನಡೆದಿದೆ.

kadaba times
uniq

ಆಂಧ್ರಪ್ರದೇಶದ ಕಡಪ ಜಿಲ್ಲೆ ನಿವಾಸಿ ರಾಜಶೇಖರ ನಾಯ್ಡು(49ವ.)ಮೃತಪಟ್ಟವರು.

ಲಾರಿ ಚಾಲಕರಾಗಿದ್ದು ಅ.7ರಂದು ಲಾರಿಯಲ್ಲಿ(ಕೆಎ 01, ಎಆರ್ 7209)ಚಾಲಕನಾಗಿ ಆಂಧ್ರಪ್ರದೇಶದಿಂದ ಮೂಡಬಿದ್ರೆಗೆ ಬಂದು ಲಾರಿಯಲ್ಲಿ ಮಣ್ಣು ಲೋಡು ಮಾಡಿಕೊಂಡು ವಾಪಾಸು ಹೋಗುತ್ತಿರುವಾಗ ಅ.9ರಂದು ತಡರಾತ್ರಿ ಉಪ್ಪಿನಂಗಡಿ ಗ್ರಾಮದ ಪಂಜಳ ಪೆಟ್ರೋಲ್ ಪಂಪ್ ಬಳಿ ತಲುಪಿದ್ದರು.

kadaba times
kadaba times

ಅಲ್ಲಿ   ಲಾರಿ ರಸ್ತೆ ಬದಿಗೆ ಹೋಗಿ ನಿಂತಿದ್ದನ್ನು ಸ್ಥಳೀಯರು ನೋಡಿ ಸ್ಥಳಕ್ಕೆ ಹೋಗಿದ್ದು, ಈ ವೇಳೆ ಚಾಲಕ ರಾಜಶೇಖರ ನಾಯ್ಡು ಅಸ್ವಸ್ಥಗೊಂಡಿದ್ದು, ಅವರನ್ನು ಉಪಚರಿಸಿ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.

ರಾತ್ರಿ 1.30ರ ವೇಳೆಗೆ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ಪರಿಶೀಲನೆ ನಡೆಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles