ನೆಲ್ಯಾಡಿ ಗ್ರಾಮ ಪಂಚಾಯತ್ ಗೆ ಖಾಯಂ ಪಿಡಿಒ ನೇಮಕ

kadaba times

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್ ಖಾಯಂ ಅಭಿವೃದ್ಧಿ ಅಧಿಕಾರಿಯಾಗಿ ಜಯರಾಜ್ ಎಂಬವರು ಆಗಮಿಸಿ ಅ.10ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

kadaba times
uniq

ಈ ತನಕ ನೆಲ್ಯಾಡಿ ಗ್ರಾ.ಪಂ.ಪ್ರಭಾರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್‌ಕುಮಾರ್‌ರವರು ಅಧಿಕಾರ ಹಸ್ತಾಂತರ ಮಾಡಿದರು.

kadaba times
kadaba times

ಶಿಬಾಜೆ ಗ್ರಾ.ಪಂ.ಪಿಡಿಒ ಆಗಿದ್ದ ಜಯರಾಜ್ ಅವರನ್ನು ನೆಲ್ಯಾಡಿ ಗ್ರಾ.ಪಂ.ಗೆ ವರ್ಗಾವಣೆಗೊಳಿಸಲಾಗಿತ್ತು. ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿಯಾಗಿರುವ ಜಯರಾಜ್ ಅವರು ಈ ಹಿಂದೆ ಗುತ್ತಿಗಾರು, ಐತ್ತೂರು, ಕೌಕ್ರಾಡಿ, ಶಿಬಾಜೆ ಗ್ರಾ.ಪಂ.ಗಳಲ್ಲಿ ಪಂಚಾಯತು ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Related Articles

Latest Articles