ಕಡಬ ತಾಲೂಕು ಭೂ ನ್ಯಾಯ ಮಂಡಳಿಗೆ ನಾಮನಿರ್ದೇಶನಗೊಂಡ ನೆಲ್ಯಾಡಿಯ ವಕೀಲ

kadaba times

ಕಡಬ ತಾಲೂಕು ಭೂ ನ್ಯಾಯ ಮಂಡಳಿಗೆ ನೆಲ್ಯಾಡಿ ನಿವಾಸಿ, ನೋಟರಿ ಹಾಗೂ ವಕೀಲರಾದ ಇಸ್ಮಾಯಿಲ್ 5 ನೆಲ್ಯಾಡಿ ನೇಮಕಗೊಂಡಿದ್ದಾರೆ.

kadaba times
uniq

ಇವರನ್ನು  ನಾಮ ನಿರ್ದೇಶನಗೊಳಿಸಿ ಕಂದಾಯ ಇಲಾಖಾ(ಭೂ ಸುಧಾರಣೆ) – ಅಧೀನ ಕಾರ್ಯದರ್ಶಿಯವರು ಅವರನ್ನು ನಾಮ ನಿರ್ದೇಶನಗೊಳಿಸಿ ಆದೇಶ ಮಾಡಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ಅವರು ನೆಲ್ಯಾಡಿ ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ,  ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜು ಪೂರ್ವ ವಿದ್ಯಾರ್ಥಿ ಸಂಘದ ಕೋಶಾಧಿಕಾರಿಯಾಗಿ,  ಪುತ್ತೂರು ಸೀರತ್ ಕಮಿಟಿ ಕಾರ್ಯದರ್ಶಿಯಾಗಿ, ಮಂಗಳೂರು ಹಿದಾಯ ಫೌಂಡೇಶನ್ ಕಾನೂನು ಸಲಹೆಗಾರರಾಗಿ, ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಲೆಕ್ಕ ಪರಿಶೋಧಕರಾಗಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

kadaba times
kadaba times

ಇವರು ದ.ಕ.ಜಿಲ್ಲಾ ವಕ್ಸ್ ಸಲಹಾ ಸಮಿತಿ ಸದಸ್ಯರಾಗಿ, ಪುತ್ತೂರು ತಾಲೂಕು ಕೆಡಿಪಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

Related Articles

Latest Articles