ಕಡಬ ಟೈಮ್ಸ್ (KADABA TIMES):ಭಗವಂತನ ಸ್ಮರಣೆಗಿಂತ ಪುಣ್ಯದ ಕೆಲಸ ಬೇರೆ ಇಲ್ಲ,ಈ ಕಲಿಯುಗದಲ್ಲಿ ನಾಮ ಸಂಕೀರ್ತನೆಗೆ ಮಹತ್ವವಿದೆ.ಈ ಮೂಲಕ ಸನಾತನ ಧರ್ಮ ಸಂಸ್ಕೃತಿ ಉಳಿಸುವಲ್ಲಿ ನಾವು ಮುಂದಾಗೋಣ ಎಂದು ಜಗದ್ಗುರು ಶ್ರೀ ಮಧ್ಯ್ವಾಚಾರ್ಯ ಮಹಾಸಂಸ್ಥಾನಂ ಶ್ರೀ ಸುಬ್ರಹ್ಮಣ್ಯ ಮಠಾದೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.


ಅವರು 64ನೇ ವರ್ಷದ ಕಡಬ ಏಕಾಹ ಭಜನಾ ಮಹೋತ್ಸವದ ಸಂಪ್ರಾದಾಯಿಕ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಿರ್ವಚನ ನಿಡಿದರು.ಪ್ರಪಂಚದಲ್ಲಿ ಎಲ್ಲಾ ಜೀವ ರಾಶಿಗಳಿಗೆ ನಾಲಿಗೆ ಇದೆ, ಆದ್ರೆ ಮಾತನಾಡುವ ಶಕ್ತಿ ನೀಡಿರುವುದು ಮನುಷ್ಯನಿಗೆ ಮಾತ್ರ. ಈ ನಾಲಿಗೆಯಲ್ಲಿ ಭಗವಂತನ ನಾಮೋಚ್ಚಾರಣೆ ಮಾಡಬೇಕು.ಇಲ್ಲದಿದ್ದರೆ ಜೀವನ ವ್ಯರ್ಥವಾಗುತ್ತದೆ.




ಹಿಂದೆ ದೀರ್ಘ ಕಾಲ ತಪಸ್ಸು ಮಾಡಿ ಭಗವಂತನ್ನು ಖುಷಿಪಡಿಸಬೇಕಿತ್ತು.ಕಲಿಯುಗದಲ್ಲಿ ನಾಮ ಸಂಕೀರ್ತನೆ ಮೂಲಕ ಭಗವಂತನನ್ನು ಸಂತೋಷಪಡಿಸಬಹುದು . ಭಜನೆಗೆ ಸೀಮಿತವಾಗಿರುವ ಈ ಏಕಾಹ ಭಜನೆ ಆರಕ್ಷಕ ಸಮುದಾಯದ ಸಹಕಾರದೊಂದಿಗೆ ಜಾತ್ರೆಯಂತೆ ನಡೆಯುತ್ತಿದೆ. ಇದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.


ಏಕ ಭಜನೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಎಂ .ಆರ್ ಸ್ವಾಗತಿಸಿದರು .ವೇದಿಕೆಯಲ್ಲಿ ಕದಬ ಠಾಣಾ ಉಪನಿರೀಕ್ಷಕ ಅಭಿನಂದನ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರ, ಭಜನಾ ಮಂಡಳಿ ಅಧ್ಯಕ್ಷ ಸೋಮಪ್ಪ ನಾಯ್ಕ್ ,ಏಕ ಭಜನೋತ್ಸವ ಸಮಿತಿ ಕಾರ್ಯದರ್ಶಿ ರಾಮಚಂದ್ರ ಸೇರಿದಂತೆ ಪ್ರಮುಖರಿದ್ದರು