24.9 C
Kadaba
Sunday, April 6, 2025

ಹೊಸ ಸುದ್ದಿಗಳು

ನಮ್ಮ ಕಡಬಕ್ಕೆ ಹೆಮ್ಮೆ :ನಿವೃತ್ತಿಗೊಂಡು ಹುಟ್ಟೂರಿಗೆ ಆಗಮಿಸುತ್ತಿರುವ ಭೂಸೇನೆ ಯೋಧ : ನಾಳೆ ಗೋಳಿತ್ತೊಟ್ಟಿನಲ್ಲಿ ಅದ್ದೂರಿ ಸ್ವಾಗತ

ರಾಷ್ಟ್ರಭಕ್ತರ ವೇದಿಕೆ ವತಿಯಿಂದ ಅದ್ದೂರಿ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್ (KADABA TIMES) ನೆಲ್ಯಾಡಿ:  ಭಾರತೀಯ ಭೂಸೇನೆಯಲ್ಲಿ ಯೋಧರಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 17 ವರ್ಷ ಸೇವೆ ಸಲ್ಲಿಸಿದ್ದ ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಅಂಬುಡೇಲು ನಿವಾಸಿ ಕರುಣಾಕರ ಶೆಟ್ಟಿಯವರು ಮಾ.31ರಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ.

kadabatimes.in

ಎ.6ರಂದು ಬೆಳಿಗ್ಗೆ ಹುಟ್ಟೂರಿಗೆ ಆಗಮಿಸುತ್ತಿರುವ ಕರುಣಾಕರ ಶೆಟ್ಟಿಯವರಿಗೆ ಗೋಳಿತ್ತೊಟ್ಟು ರಾಷ್ಟ್ರಭಕ್ತರ ವೇದಿಕೆ ವತಿಯಿಂದ ಅದ್ದೂರಿ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ಗೋಳಿತ್ತಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.

kadabatimes.in

ಕರುಣಾಕರ ಶೆಟ್ಟಿಯವರು ಗೋಳಿತ್ತೊಟ್ಟು ಗ್ರಾಮದ ಅಂಬುಡೇಲು ನಿವಾಸಿ ಕೃಷ್ಣ ಶೆಟ್ಟಿ ಮತ್ತು ಸುಂದರಿ ದಂಪತಿಯ ಪುತ್ರ.  ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗೋಳಿತ್ತಟ್ಟು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕೊಣಾಲು ಸರಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ್ದರು. ಬಡತನದ ಹಿನ್ನೆಲೆಯಲ್ಲಿ ಬಳಿಕದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಖಾಸಗಿಯಾಗಿ ಉದ್ಯೋಗ ಮಾಡುತ್ತಿದ್ದರು.

kadabatimes.in

ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದ ಕರುಣಾಕರ ಶೆಟ್ಟಿಯವರು ಸೇನಾ ನೇಮಕಾತಿ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದರು.  ನಾಲ್ಕನೇ ಪ್ರಯತ್ನದಲ್ಲಿ ಭಾರತೀಯ ಭೂ ಸೇನೆಗೆ ಆಯ್ಕೆಗೊಂಡಿದ್ದ ಇವರು 2008 ಮಾ.24ರಂದು ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡಿದ್ದರು. ಬಿಹಾರದ ಗಯಾದಲ್ಲಿ ಸೇನಾ ತರಬೇತಿ ಮುಗಿಸಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೇವೆ ಆರಂಭಿಸಿದ್ದರು.

kadabatimes.in

ಅಲ್ಲಿಂದ ಜಮ್ಮು ಕಾಶ್ಮೀರದ ಉರಿ ಸೆಕ್ಟರ್, ತಂಗ್‌ದಾರ್, ಅಸ್ಸಾಂ ರಾಜ್ಯದ ಮಿಸ್ಸಮಾರಿ, ಚೀನಾ ಗಡಿ ಪ್ರದೇಶವಾದ ಅರುಣಾಚಲ ಪ್ರದೇಶದ ತವಂಗ್ ಹೋಳಿ ವಾಟರ್, ಪಂಜಾಬ್‌ನ ಲೂದಿಯಾನ ಹಾಗೂ ಆಕ್ಸಿಜನ್ ರಹಿತ ಪ್ರದೇಶ ಮತ್ತು ಅತಿಯಾದ ಕೋರೆಯುವ ಚಳಿಯನ್ನು ಹೊಂದಿರುವ ಪ್ರಪಂಚದ ಅತೀ ಎತ್ತರದ ಯುದ್ಧ ಭೂಮಿ ಲೇ ಲಡಾಕ್‌ನಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಬೆಂಗಳೂರು, ನಂತರ ಅಸ್ಸಾಂ, ಮಹಾರಾಷ್ಟ್ರದ ಪುಣೆಯಲ್ಲಿ ಸೇವೆ ಸಲ್ಲಿಸಿ ಮಾ.31ರಂದು ನಿವೃತ್ತಿಯಾದರು. ಇವರ ಪತ್ನಿ ಭಾಗ್ಯಶ್ರೀ, ಪುತ್ರ ಶೌರ್ಯ ಶೆಟ್ಟಿ ಗೋಳಿತ್ತೊಟ್ಟು ಅಂಬುಡೇಲುನಲ್ಲಿ ವಾಸವಾಗಿದ್ದಾರೆ.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.