ಕಡಬ ಟೈಮ್ಸ್, (KADABA TIME S): ಕಡಬ ಪರಿಸರದಲ್ಲಿ ಶನಿವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಹಲವು ಮರಗಳು ರಸ್ತೆಗೆ ಉರುಳಿದೆ.ವಿದ್ಯುತ್ ಕಂಬಗಳು, ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.


ಕಡಬ- ಪಂಜ ರಸ್ತೆಯುದ್ದಕ್ಕೂ ಅಲ್ಲಲ್ಲಿ ಮರಗಳು ಮುರಿದು ರಸ್ತೆಗೆ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಕೋಡಿಂಬಾಳ ಗ್ರಾಮದ ಕೋರಿಯರ್ ಎಂಬಲ್ಲಿ ಎರಡು ಮನೆಗಳಿಗೆ ಮರ ಬಿದ್ದು ಹಾನಿಯಾಗಿರುವುದಾಗಿ ವರದಿಯಾಗಿದೆ.


ಕಡಬ ಪ.ಪಂ ವ್ಯಾಪ್ತಿಯ ಕಳಾರದಲ್ಲಿ ಸಿಡಿಲಿನ ಅಬ್ಬರಕ್ಕೆ ಓರೋಡಿ ನಿವಾಸಿ ಶಾಫಿ ಎಂಬವರ ಮನೆಯ ಸಿ ವಯರಿಂಗ್ ಸಹಿತ ಗೃಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದು ಸ್ವಿಚ್ ಬೋರ್ಡ್ ಗಳು ಕಿತ್ತು ಬಂದಿದೆ. ಮನೆಮಂದಿ ಪೇಟೆಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ.


ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆ ಸಿಬ್ಬಂದಿಗಳ ಜೊತೆ ಕಡಬ ಶೌರ್ಯ ವಿಪತ್ತು ನಿರ್ವಹಣಾ ತಂಡವು ವಿದ್ಯುತ್ ಲೈನಿಗೆ ಬಿದ್ದಿರುವ ಮರವನ್ನು ತೆರವು ಗೊಳಿಸಲು ಸಕರಿಸಿದ್ದಾರೆ.

