31.6 C
Kadaba
Saturday, April 5, 2025

ಹೊಸ ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯ: ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಳಿಂಗ ಸರ್ಪದ ರಕ್ಷಣೆ

ಜನರು ಎಲ್ಲೆಂದರಲ್ಲಿ ಎಸೆಯುವ ವಸ್ತುಗಳು ಜೀವ ಜಂತುಗಳ ಪ್ರಾಣಕ್ಕೆ ಕುತ್ತು ತಾರದಿರಲಿ

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್ಸ್ (KADABA TIMES):ಸುಬ್ರಹ್ಮಣ್ಯ: ಜನವಸತಿ ಪ್ರದೇಶದೆಡೆಗೆ ಬಂದ ಕಾಳಿಂಗ ಸರ್ಪವೊಂದು ಆಪತ್ತಿಗೆ ಸಿಲುಕಿ ಕೊನೆಗೆ ಉರಗಪ್ರೇಮಿಯೊಬ್ಬರ ನಿರಂತರ ಪ್ರಯತ್ನದಿಂದ ಸುರಕ್ಷಿತವಾಗಿ ಕಾಡು ಸೇರಿದೆ.

kadabatimes.in

ಕಡಬ ತಾಲೂಕಿನ ಆದಿ ಸುಬ್ರಹ್ಮಣ್ಯ ಸಮೀಪದ ತೋಟದಲ್ಲಿ ಕಾಳಿಂಗ ಸರ್ಪವೊಂದು ಕೃಷಿ ರಕ್ಷಣೆಗೆ ಅಳವಡಿಸಿದ್ದ ಬಲೆಗೆ ಸಿಲುಕಿ  ತನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿತ್ತು . ಈ ದೃಶ್ಯ ಗಮನಿಸಿದ ಸ್ಥಳೀಯರು ಸುಬ್ರಹ್ಮಣ್ಯದ ಉರಗ ಪ್ರೇಮಿ ಮಾಧವ ಅವರಿಗೆ ಮಾಹಿತಿ ನೀಡಿದ್ದರು.

kadabatimes.in

ತಕ್ಷಣ ಸ್ಥಳಕ್ಕೆ ತಲುಪಿದ ಉರಗ ಪ್ರೇಮಿ,  ಕಾಳಿಂಗ ಸರ್ಪದ ಹೊಟ್ಟೆಯ ಭಾಗದಲ್ಲಿ ಸುತ್ತಿಕೊಂಡಿದ್ದ ಬಲೆಯ ತುಂಡನ್ನು ತೆಗೆದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.  ಬಲೆಯಿಂದ ಮುಕ್ತಗೊಂಡ ಕಾಳಿಂಗ ಸರ್ಪ ತನ್ನ ಪಾಡಿಗೆ ಕಾಡಿನತ್ತ ಸಾಗಿದೆ.

kadabatimes.in

ಉರಗತಜ್ಞ ಮಾಧವ ಅವರು ಕಡಬ ಟೈಮ್ ಜೊತೆ  ಮಾತನಾಡಿ,  ಪ್ರಾಣಿಗಳ ಉಪಟಳದಿಂದ ಮುಕ್ತಿ ಪಡೆಯಲು ಬೇಲಿಯಲ್ಲಿ ಬಲೆ ಅಳವಡಿಸಿದ್ದರು . ಆ ಬೇಲಿ  ಬಲೆಯಲ್ಲಿ ಕಾಳಿಂಗಸರ್ಪ ಸಿಕ್ಕಿಹಾಕಿಕೊಂಡಿದೆ. ಅದನ್ನು ರಕ್ಷಿಸಿದ್ದೇನೆ.  ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕಾಳಿಂಗ ಸರ್ಪಗಳ ವಂಶಾಭಿವೃದ್ಧಿ ಸಮಯವಾಗಿದ್ದು, ಇವು ಈಗ ಎಲ್ಲೆಡೆ ಅತ್ತಿಂದಿತ್ತ ಓಡಾಡುತ್ತಿರುತ್ತವೆ” ಸಾರ್ವಜನಿಕರು ಎಚ್ಚರದಿಂದ ಇಅರಬೇಕು, ಅವುಗಳ ಎದುರುಗೊಂಡಾಗ ತೊಂದರೆ ಮಾಡಬಾರದು ಎಂದಿದ್ದಾರೆ. 

kadabatimes.in

ಕೃಷಿಕರು ತಾವು ಉಪಯೋಗಿಸಿದ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು, ಅವುಗಳು ಜಲಚಲಗಳಿಗೆ, ಪ್ರಾಣಿಗಳಿಗ ಜೀವಕ್ಕೆ ಅಪಾಯ ತರುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಬಗ್ಗೆ ಜನರು ಜಾಗೃತರಾಗಬೇಕಿದೆ.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.