ಸರಕಾರಿ ಜಾಗದಿಂದ ಮರ ಕಡಿದು ಸಾಗಾಟ : ಲಾರಿ ಸಹಿತ ನಾಲ್ವರ ವಶಕ್ಕೆ ಪಡೆದ ಸುಳ್ಯ ಅರಣ್ಯಾಧಿಕಾರಿಗಳು

kadaba times

ಸುಳ್ಯ ವಲಯದ ಆರಂತೋಡು ಗ್ರಾಮದ ಮಲ್ಲಡ್ಕ ಎಂಬಲ್ಲಿ ಸರಕಾರಿ ಜಮೀನಿನಲ್ಲಿದ್ದ ಕಿರಾಲ್‌ಬೋಗಿ ಜಾತಿಯ ಮರವನ್ನು ಅಕ್ರಮವಾಗಿ ಕಡಿದು ಲಾರಿಯಲ್ಲಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸುಳ್ಯ ಅರಣ್ಯ ಇಲಾಖೆಯ ಗಸ್ತು ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸುಮಾರು ₹8.40 ಲಕ್ಷ ಮೌಲ್ಯದ 14 ಮರದ ದಿಮ್ಮಿಗಳು ಹಾಗೂ ಲಾರಿಯನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

kadaba times
uniq

ಸುಳ್ಯ:ಸುಳ್ಯ ತಾಲೂಕಿನ ಆರಂತೋಡು ಶಾಖಾ ವ್ಯಾಪ್ತಿಯ ಅರಂತೋಡು ಗ್ರಾಮದ ಮಲ್ಲಡ್ಕ ಎಂಬಲ್ಲಿ ಸರಕಾರಿ ಜಾಗದಲ್ಲಿದ್ದ ಮೌಲ್ಯಯುತ ಕಿರಾಲ್‌ಬೋಗಿ ಮರವನ್ನು ಅಕ್ರಮವಾಗಿ ಕಡಿದು ದಿಮ್ಮಿಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಸುಳ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಭೇದಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಲಾರಿ, 14 ಮರದ ದಿಮ್ಮಿಗಳನ್ನು ಜಪ್ತಿ ಮಾಡಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ರಾತ್ರಿ ಗಸ್ತು ವೇಳೆ ಬಯಲಾದ ಅಕ್ರಮ:ಆಗಸ್ಟ್ 26ರ ರಾತ್ರಿ ಸುಳ್ಯ ವಲಯದ ರಾತ್ರಿ ಗಸ್ತು ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ಗಸ್ತು ತಿರುಗುತ್ತಿದ್ದಾಗ, ನೆಲ್ಲೂರು ಕೆಮ್ರಾಜೆ ಗ್ರಾಮದ ದೊಡ್ಡತೋಟದಿಂದ ಮರ್ಕಂಜ ಕಡೆಗೆ ಹೋಗುವ ರಸ್ತೆಯ ಹೈದಂಗೂರು ಎಂಬಲ್ಲಿ ಸಂಶಯಾಸ್ಪದವಾಗಿ ಚಲಿಸುತ್ತಿದ್ದ ಲಾರಿಯನ್ನು (ನೋಂದಣಿ ಸಂಖ್ಯೆ: KA 44 A 2650) ತಡೆದು ನಿಲ್ಲಿಸಿ ತಪಾಸಣೆ ನಡೆಸಿದರು.

ಪರಿಶೀಲನೆ ವೇಳೆ ಲಾರಿಯಲ್ಲಿ ಯಾವುದೇ ಸೂಕ್ತ ಪರವಾನಗಿ ಅಥವಾ ದಾಖಲೆಗಳಿಲ್ಲದೆ ಅಕ್ರಮವಾಗಿ 14 ಕಿರಾಲ್‌ಬೋಗಿ ಜಾತಿಯ ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಸಾಗಿಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಅರಣ್ಯಾಧಿಕಾರಿಗಳು ಲಾರಿ ಹಾಗೂ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳ ವಿವರ:ಅಕ್ರಮ ಮರ ಕಡಿತಲೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಕೆಳಗಿನ ನಾಲ್ವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಯಶವಂತ ಯು.ಜಿ. (ಉಳುವಾರು-ಮಲ್ಲಡ್ಕ ಮನೆ, ಆರಂತೋಡು ಗ್ರಾಮ),ತರುಣ್ ಯು.ವೈ. (ಮಲ್ಲಡ್ಕ ಮನೆ, ಆರಂತೋಡು ಗ್ರಾಮ),ದೀಕ್ಷಿತ್ ಡಿ. (ಚಾಲಕ – ಬಾಲಾಜೆ ಮನೆ, ಜಾಲ್ಲೂರು ಗ್ರಾಮ),ಗಗನ್ ಕೆ. (ಲಾರಿ ಮಾಲೀಕ – ಕುಕ್ಕುಜಡ್ಕ ಮನೆ, ಅಮರಮುಡೂರು ಗ್ರಾಮ)ಬಂಧಿತರ ವಿರುದ್ಧ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

kadaba times
kadaba times

ಜಪ್ತಿ ಮಾಡಲಾದ 14 ಕಿರಾಲ್‌ಬೋಗಿ ದಿಮ್ಮಿಗಳು ಹಾಗೂ ಲಾರಿಯ ಒಟ್ಟು ಮೌಲ್ಯವನ್ನು ₹8,40,144/- ಎಂದು ಅಂದಾಜಿಸಲಾಗಿದೆ.

ಕಾರ್ಯಾಚರಣೆ ತಂಡ:ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಅವರ ನಿರ್ದೇಶನ ಹಾಗೂ ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಅವರ ಮಾರ್ಗದರ್ಶನದಲ್ಲಿ, ಸುಳ್ಯ ವಲಯ ಅರಣ್ಯಾಧಿಕಾರಿ (RFO) ನಿರಂಜನ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

ತಂಡದಲ್ಲಿ ಆರಂತೋಡು ಶಾಖಾ ಡಿಆರ್‌ಎಫ್‌ಒ ವಿನಾಯಕ ದುರದುಂಡಿ, ಕಾಲಬೈರವ ಗಸ್ತು ಪಡೆಯ ಡಿಆರ್‌ಎಫ್‌ಒ ನವೀನ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ದೀಪಕ್ ಕೆ.ಎಸ್, ಶಿವಾನಂದ ಬಳಗಾನೂರ, ಅರಣ್ಯ ವೀಕ್ಷಕ ಅಭಿಲಾಷ್ ಹಾಗೂ ವಾಹನ ಚಾಲಕ ಪುರುಷೋತ್ತಮ ಕೆ.ಎಸ್ ಭಾಗವಹಿಸಿದ್ದರು. ಸುಳ್ಯ ವಲಯ ಅರಣ್ಯಾಧಿಕಾರಿ ನಿರಂಜನ ಅವರು ಪ್ರಕರಣದ ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Latest Articles